ಲೈಂಗಿಕ ಕಿರುಕುಳ: ಪೀಡಕನ ರುಂಡ ಚೆಂಡಾಡಿದ ಮಹಿಳೆ

ಭಾನುವಾರ, 22 ಜನವರಿ 2012 (10:02 IST)
ತನಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ರುಂಡವನ್ನೇ ಮಹಿಳೆಯೊಬ್ಬಳು ಚೆಂಡಾಡಿದ ಘಟನೆ ಮಧ್ಯ ಪ್ರದೇಶದ ಅಮೋಗಾ ಗ್ರಾಮದಲ್ಲಿ ನಡೆದಿದೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಜಮೀನಿನಲ್ಲಿ ಒಬ್ಬಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದುದನ್ನು ಗಮನಿಸಿದ ಮಹಿಳೆ ಕೊಡಲಿಯಿಂದ ಆತನ ತಲೆಯನ್ನು ಕಡಿದಿದ್ದಾಳೆ.

ಯಾದವ್‌ನ ಕೊಲೆ ಮಾಡಿದ ಮಹಿಳೆ ಆತನ ತಲೆಯನ್ನು ಒಂದು ಕಿಲೋ ಮೀಟರ್‌ ದೂರ ಇರುವ ಈಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಆಕೆಯನ್ನು ತಡೆದು ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಗ್ರಾಮೀಣ ವಿಭಾಗದ ಹೆಚ್ಚುವರಿ ರಕ್ಷಣಾಧಿಕಾರಿ ತುಷಾರ್‌ ಕಾಂತ್‌ ವಿದ್ಯಾರ್ಥಿ, ಈ ಮಹಿಳೆ ಒಬ್ಬಳೇ ನಡೆದು ಹೋಗುತ್ತಿದ್ದಾಗ ಶ್ಯಾಮ್‌ಲಾಲ್‌ ಯಾದವ್‌ ತನ್ನ ಮನೆಗೆ ಆಗಮಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ಆತನನ್ನು ಹತ್ಯೆ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ.

ಎರಡು ಮಕ್ಕಳ ತಾಯಿಯಾಗಿರುವ ಈಕೆ ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು, ಅಮರ್‌ ಗಢದಲ್ಲಿರುವ ತನ್ನ ತಂಡನ ಮನೆಯಲ್ಲಿ ವಾಸಿಸುತ್ತಿದ್ದಳು. 2009ರಲ್ಲಿ ಈಕೆಯ ಪತಿಗೆ ಕಳವು ಆಪಾದನೆಯ ಮೇರೆಗೆ ಜೈಲು ಶಿಕ್ಷೆಯಾಗಿತ್ತು. ಇದಾದ ನಂತರ ಆಕೆ ತನ್ನ ಮಕ್ಕಳೊಂದಿಗೆ ತಾಯಿಯ ಮನೆ ಅಮೋಗಾಕ್ಕೆ ಬಂದಿದ್ದಳು.

ಆಕೆ ಮದುವೆಯಾಗುವ ಮುನ್ನ ಯಾದವ್‌ ಪ್ರೀತಿಸುತ್ತಿದ್ದ. ಆಕೆಗೆ ಮತ್ತೆ ತವರಿಗೆ ಮರಳಿದ ನಂತರ ಪ್ರತಿನಿತ್ಯ ಹಿಂಬಾಲಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ