ಒಂಟಿ ಫ್ರೆಂಚ್ ಮಹಿಳೆಯ ಕತ್ತು ಕುಯ್ದು ಹಾಡಹಗಲೇ ಕೊಲೆ

ಗುರುವಾರ, 9 ಫೆಬ್ರವರಿ 2012 (03:18 IST)
ಇಲ್ಲಿ ವಾಸವಾಗಿದ್ದ 55 ವರ್ಷದ ಫ್ರೆಂಚ್ ಮಹಿಳೆ ಅಲೆನ್ ಅಮುದಾ ಅಲಿಯಾಸ್ ಜಯಮಣಿ ಎಂಬವರ ಕತ್ತು ಕುಯ್ದು ಕೊಲೆ ಮಾಡಲಾಗಿದೆ. ಘಟನೆ ಬುಧವಾರ ನಡೆದಿದ್ದು, ಕೊಲೆಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ.

ಅನಾಮಿಕರು ದೂರವಾಣಿ ಕರೆ ಮಾಡಿ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ದೂರವಾಣಿ ಸಂಖ್ಯೆಯನ್ನು ಆಧರಿಸಿ ತನಿಖೆ ಕೈಗೊಳ್ಳಲಾಗುತ್ತಿದೆ.

ಫ್ರೆಂಚ್ ಮಹಿಳೆ ಅಲೆನ್ ಅಮುದಾ ಅವರು ಒಬ್ಬರೇ ಮನೆಯಲ್ಲಿ ವಾಸವಾಗಿದ್ದು, ಮಕ್ಕಳು ಮತ್ತು ಬಂಧುಗಳು ಫ್ರಾನ್ಸ್‌ನಲ್ಲಿ ವಾಸವಾಗಿದ್ದಾರೆ. ಚಿನ್ನಾಭರಣ ಸಂಪತ್ತು ಲೂಟಿಗಾಗಿ ಈ ಕೊಲೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ