ಉತ್ತರ ಭಾರತದಲ್ಲಿ ಲಘು ಭೂಕಂಪ: 5 ಮಂದಿಗೆ ಗಾಯ

ಸೋಮವಾರ, 5 ಮಾರ್ಚ್ 2012 (20:24 IST)
ಉತ್ತರ ಭಾರತದಲ್ಲಿ 4.9 ರಿಕ್ಟರ್ ಮಾಪಕ ಪ್ರಮಾಣದಲ್ಲಿ ಲಘು ಭೂಕಂಪ ಸಂಭವಿಸಿದ್ದು, ಕೆಲವರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ನವದೆಹಲಿ, ಪಂಜಾಬ್, ಉತ್ತರಪ್ರದೇಶ, ರಾಜಸ್ಥಾನ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಲಘು ಭೂಕಂಪ ಸಂಭವಿಸಿದ್ದು, ನವದೆಹಲಿಯಲ್ಲಿ 5 ಮಂದಿಗೆ ಗಾಯಗಳಾಗಿವೆ

ದೆಹಲಿ-ಹರಿಯಾಣಾ ಗಡಿಭಾಗದಲ್ಲಿ ಭೂಕಂಪದ ಕೇಂದ್ರಬಿಂದುವಾಗಿದೆ.ಹರಿಯಾಣಾದ ಗುರ್ಗಾಂವ್ ನಗರದಲ್ಲಿ ಕೆಲ ಕಟ್ಟಡಗಳನ್ನು ಖಾಲಿ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

15-20 ಸೆಕೆಂಡ್‌ಗಳವರೆಗೆ ಲಘು ಭೂಕಂಪ ಸಂಭವಿಸಿದೆ. ಹರಿಯಾಣಾದ ಉಕ್ಲಾನಾ ನಗರದಲ್ಲಿ ಐದು ಮಂದಿಗೆ ಗಾಯಗಳಾಗಿದ್ದು, ಕೆಲ ಕಟ್ಟಡಗಳು ಜಖಂಗೊಂಡಿವೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಪ್ರಕೋಪ ತಡೆ ದಳದ ಮುಖ್ಯಸ್ಥ ಪ್ರಕಾಶ್ ಮಿಶ್ರಾ ಮಾತನಾಡಿ, ಯಾವುದೇ ತುರ್ತುಪರಿಸ್ಥಿತಿಯನ್ನು ಎದುರಿಸುವಲ್ಲಿ ಸಜ್ಜುಗೊಂಡಿದೆ. ದೆಹಲಿಯಲ್ಲಿ ಸಂಭವಿಸಿದ ಭೂಕಂಪದ ಬಗ್ಗೆ ಮಾಹಿತಿಯಿಲ್ಲ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ