ಎನ್‌ಡಿಟಿವಿ ಏಪ್ರಿಲ್ ಸಮೀಕ್ಷೆ: ಎನ್‌ಡಿಎ ಅಧಿಕಾರಕ್ಕೆ ಬರೋದು ಗ್ಯಾರಂಟಿ

ಮಂಗಳವಾರ, 15 ಏಪ್ರಿಲ್ 2014 (15:46 IST)
ನವದೆಹಲಿ: ಎನ್‌ಡಿಟಿವಿ ಏಪ್ರಿಲ್ ತಿಂಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ಪಷ್ಟಬಹುಮತ ಗಳಿಸಿ ಅಧಿಕಾರದ ಗದ್ದುಗೆಗೆ ಏರಲಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಒಟ್ಟು 275 ಸ್ಥಾನಗಳಲ್ಲಿ ಜಯಗಳಿಸಿ, ಸರ್ಕಾರ ರಚನೆಗೆ ಬೇಕಾದ ಬಹುಮತದ ಸಂಖ್ಯೆಯನ್ನು ದಾಟಿಹೋಗಲಿದೆ.ಬಿಜೆಪಿ 226 ಸೀಟುಗಳನ್ನು ಗಳಿಸುವ ಮೂಲಕ ಹಿಂದೆಂದೂ ಕಂಡಿರದ ಅತ್ಯುತ್ತಮ ಸಾಧನೆಯನ್ನು ಮಾಡಲಿದೆ.ಆಂಧ್ರದಲ್ಲಿ ತೆಲುಗುದೇಶಂ ಪಕ್ಷ ಮುಂತಾದ ತಡವಾಗಿ ಮಾಡಿಕೊಂಡ ಕೆಲವು ಮೈತ್ರಿಗಳಿಂದ ಬಿಜೆಪಿ ಬಹುಮತದ ಮ್ಯಾಜಿಕ್ ಗಡಿಯನ್ನು ದಾಟಿ ಭದ್ರವಾಗಿ ನೆಲೆವೂರಲಿದೆ.ಬಿಜೆಪಿ ಸಾಧನೆ ಹೀಗಿದ್ದರೆ, ಅದರ ಪ್ರಮುಖ ಎದುರಾಳಿ ಕಾಂಗ್ರೆಸ್ ಇತಿಹಾಸದಲ್ಲೇ ಅತೀ ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲಿದೆ.

PR
PR
ಕಾಂಗ್ರೆಸ್ 100ಕ್ಕಿಂತ ಕಡಿಮೆ ಸ್ಥಾನಗಳಿಗೆ ಎಂದೂ ತಲುಪಿದ್ದಿಲ್ಲ. ಆದರೆ ಈ ಬಾರಿಯ ಎನ್‌ಡಿಟಿವಿ ಸಮೀಕ್ಷೆಯಲ್ಲಿ ಅದು 92 ಸೀಟುಗಳಿಗೆ ಕುಸಿದಿದೆ.ತನ್ನ ಮಿತ್ರಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್ 111 ಸೀಟುಗಳನ್ನು ಗೆಲ್ಲಲಿದೆ. 1999ರಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಗಳಿಸಿದ 114 ಸೀಟುಗಳಿಗಿಂತ ಇದು ಕಡಿಮೆಯಾಗಿದೆ.ಆದಾಗ್ಯೂ, ಒಂದು ತಿಂಗಳು ಮತ್ತು ಐದು ಹಂತಗಳ ಚುನಾವಣೆ ಇನ್ನೂ ಬಾಕಿಯಿದ್ದು, ಎಲ್ಲ ಪಕ್ಷಗಳು ಪ್ರಚಾರವನ್ನು ತೀವ್ರಗೊಳಿಸಿದೆ.ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆಂದು ಬಿಂಬಿಸಲಾಗಿತ್ತು.

PR
PR
ಆದರೆ ರಾಷ್ಟ್ರೀಯ ಮೈತ್ರಿಕೂಟವಾದ ಎನ್‌ಡಿಎ ಬಹುಮತದ ಗಡಿಯನ್ನು ಮುಟ್ಟುವುದಿಲ್ಲವೆಂದು ತಿಳಿಸಲಾಗಿತ್ತು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎನ್‌ಡಿಎ ಬಹುಮತದತ್ತ ಹೆಜ್ಜೆ ಹಾಕುತ್ತದೆಂದು ಹೇಳಲಾಗಿದೆ.ಉತ್ತರಪ್ರದೇಶದಲ್ಲಿ ಬಿಜೆಪಿ 51 ಸ್ಥಾನಗಳನ್ನು ಗೆಲ್ಲುವ ಮೂಲಕ 272ರ ಮ್ಯಾಜಿಕ್ ಸಂಖ್ಯೆಯನ್ನು ದಾಟುತ್ತದೆ ಎಂದು ಸಮೀಕ್ಷೆ ಹೇಳಿದೆ.

ಎನ್‌ಡಿಎ 272ರ ಮ್ಯಾಜಿಕ್ ಸಂಖ್ಯೆ ಮುಟ್ಟದಿದ್ದರೆ, ಜಯಲಲಿತಾ ಅಥವಾ ಮಮತಾ ಬ್ಯಾನರ್ಜಿ ಅವರ ಮೈತ್ರಿಗಾಗಿ ಬಿಜೆಪಿ ಮುಂದಾಗಬೇಕಿದೆ. ಜಯಲಲಿತಾ ಮತ್ತು ಮಮತಾ ತಮ್ಮ ರಾಜ್ಯದಲ್ಲಿ ಸಿಂಹಪಾಲು ಸೀಟುಗಳನ್ನು ಗೆಲ್ಲುತ್ತಾರೆಂದು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ