ಅತಿಯಾಗಿ ಮದ್ಯ ಸೇವಿಸುವ ಪ್ರಿಯಾಂಕಾ ಕೆಟ್ಟ ಹೆಸರನ್ನು ಪಡೆದಿದ್ದಾಳೆ: ಸುಬ್ರಮಣಿಯನ್ ಸ್ವಾಮಿ
ಮಂಗಳವಾರ, 15 ಏಪ್ರಿಲ್ 2014 (16:42 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾರಣಾಸಿಯಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎಂಬ ವರದಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, 'ಒಂದು ವೇಳೆ ಕಣಕ್ಕಿಳಿದಿದ್ದರೆ ಅವರು ಸೋಲಿಸಲ್ಪಡುತ್ತಿದ್ದರು. ಅವರು ತುಂಬಾ ಮದ್ಯ ಕುಡಿಯುತ್ತಾರೆ ಮತ್ತು ಜನರ ದೃಷ್ಟಿಯಲ್ಲಿ ಕೆಟ್ಟ ಹೆಸರನ್ನು ಪಡೆದಿದ್ದಾರೆ' ಎಂದು ಆಪಾದಿಸಿದ್ದಾರೆ.
PTI
"ಅವಳನ್ನವರು ಕಾಪಾಡಿದ್ದಾರೆ. ಅವಳು ಸೋಲಿಸಲ್ಪಡುತ್ತಿದ್ದಳು. ಆಕೆ ಜನಪ್ರಿಯತೆಯನ್ನು ಪಡೆದಿಲ್ಲ. ಅತಿಯಾಗಿ ಮದ್ಯವನ್ನು ಸೇವಿಸುತ್ತಾಳೆ. ಅವಳು ಮತ್ತು ಆಕೆಯ ಗಂಡ ಕೆಟ್ಟ ಹೆಸರನ್ನು ಪಡೆದಿದ್ದಾರೆ" ಎಂದು ಸ್ವಾಮಿ ಹೇಳಿದ್ದಾರೆ.
"ತನ್ನ ತಂದೆಯನ್ನು ಹತ್ಯೆ ಮಾಡಿದ ಕೈದಿಗಳನ್ನು ಜೈಲಿನಲ್ಲಿ ನೋಡಲು ಹೋಗುವ ಕೃತಘ್ನ ಮಗಳು ಗಾಂಧಿ" ಎಂದು ಸ್ವಾಮಿ ಟೀಕಿಸಿದ್ದಾರೆ.
"ಅಡ್ಡದಾರಿ ಹಿಡಿದಿರುವುದು ಪ್ರಿಯಾಂಕಾ, ವರುಣ್ ಗಾಂಧಿ ಅಲ್ಲ. ಅವನಿಗಿಂತ ಹಿರಿಯವಳಾಗಿರುವ ಆಕೆಗೆ ಮತ್ತು ಆಕೆಯ ಪಕ್ಷದವರಿಗೆ ಚಿಕ್ಕವನ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದವರು ಜರಿದರು.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಮೇಥಿಯಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜತೆಯಲ್ಲಿದ್ದ ಪ್ರಿಯಾಂಕಾ, 'ವರುಣ್ ಗಾಂಧಿ ತಪ್ಪು ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಮತ್ತು ಆತ ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುವ ಅಗತ್ಯವಿದೆ' ಎಂದು ಹೇಳಿದ್ದರು.