ಆರ್‌ಎಸ್‌ಎಸ್ ಲಷ್ಕರ್- ಇ- ತೊಯ್ಬಾದಂತೆ ಭಯೋತ್ಪಾದಕ ಸಂಘಟನೆ: ಕುಮಾರ್ ವಿಶ್ವಾಸ್
ಮಂಗಳವಾರ, 15 ಏಪ್ರಿಲ್ 2014 (17:04 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಜಿಲ್ಲೆಯಲ್ಲಿ ಪ್ರಚಾರ ಮಾಡುತ್ತಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕುಮಾರ್ ವಿಶ್ವಾಸ್ ಇಂದು ಅಮೇಥಿಯಿಂದ ತಮ್ಮ ನಾಮನಿರ್ದೇಶನವನ್ನು ಸಲ್ಲಿಸುವ ಮುನ್ನ ಹಿಂದೂ ರಾಷ್ಟ್ರೀಯವಾದಿ ಸಂಘಟನೆ ಆರ್‌ಎಸ್‌ಎಸ್ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
PTI
ತಮ್ಮ ಹೇಳಿಕೆಯಲ್ಲಿ ವಿಶ್ವಾಸ್ ಆರ್‌ಎಸ್‌ಎಸ್‌ನ ಶಿಸ್ತು 'ಭಯೋತ್ಪಾದಕ ಗುಂಪು ಲಷ್ಕರ್ ಇ ತೊಯ್ಬಾ' ದಷ್ಟೇ ಉತ್ತಮ ಎಂದು ಹೇಳಿದ್ದಾರೆ.
ತಮ್ಮ ವಿವಾದಾತ್ಮಕ ಹೇಳಿಕೆಯಲ್ಲಿ ಅವರು "ಆರ್‌ಎಸ್‌ಎಸ್‌ನ ಶಿಸ್ತು ಬಹಳ ಒಳ್ಳೆಯದು. ಲಷ್ಕರ್ ಇ ತೊಯ್ಬಾದ ಶಿಸ್ತು ಕೂಡ ತುಂಬ ಉತ್ತಮವಾಗಿದೆ. ಅಲ್ಲಿ ಜನರು ಸಾಯಲು ಸಿದ್ಧರಿರುತ್ತಾರೆ. ಅವರಿಂದ ಶಿಸ್ತು ತಿಳಿಯಿರಿ. ಆದರೆ ಹಿಂದೂ ರಾಷ್ಟ್ರವಾದವನ್ನು ಕಲಿಯ ಬೇಡಿ" ಎಂದು ಹೇಳಿದರು.
ಕೆಲದಿನಗಳ ಹಿಂದೆ ಆರ್‌ಎಸ್‌ಎಸ್ ಶಿಸ್ತುಬದ್ಧವಾದ ಸೇನೆ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಅವರು, ಒಂದು ಸಂಸ್ಥೆ ಬಹುಸಂಖ್ಯಾತರ ಪರವಾಗಿ ಮಾತನಾಡಿದರೆ, ಅದರರ್ಥ ಕೋಮು ಎಂದಾಗುತ್ತದೆಯೇ ' ಎಂದು ಪ್ರಶ್ನಿಸಿದ್ದರು. ಆದರೀಗ ಯುಟರ್ನ್ ತೆಗೆದು ಕೊಂಡಿದ್ದಾರೆ.
ಆಪ್ ನಾಯಕನ ಇಂತಹ ಹೇಳಿಕೆಯನ್ನು ಪ್ರದೇಶದ ಮುಸ್ಲಿಂ ಸಮುದಾಯ ಸ್ವೀಕರಿಸಲಿಲ್ಲ. ಅವರನ್ನು ರಾಜಕೀಯ ಪಕ್ಷದಿಂದ ಹೊರಹಾಕುವಂತೆ ಅವರು ನಾಯಕನನ್ನು ಒತ್ತಾಯಿಸಿದ್ದಾರೆ.
ಕುಮಾರ್ ವಿಶ್ವಾಸ್ ಮೇ 7, 2014 ರಂದು ನಡೆಯಲಿರುವ ಲೋಕಸಭೆ ಚುನಾವಣೆಯ ರಣರಂಗದಲ್ಲಿ ಕಾಂಗ್ರೆಸ್‌ನ 'ರಾಹುಲ್ ಗಾಂಧಿ ಮತ್ತು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿಯವರನ್ನು ಎದುರಿಸಲಿದ್ದಾರೆ.