ತೃತೀಯ ರಂಗ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸುತ್ತೆ: ಅಖಿಲೇಶ್ ಬಾಂಬ್

ಮಂಗಳವಾರ, 15 ಏಪ್ರಿಲ್ 2014 (18:38 IST)
PR
PR
ಲಕ್ನೋ: ದೇಶದಲ್ಲಿ ಪ್ರಜಾಪ್ರಭುತ್ವ ಪರಿಪಕ್ವವಾಗಿದ್ದು, ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಬೆಂಬಲದೊಂದಿಗೆ ತೃತೀಯ ರಂಗ ಸರ್ಕಾರ ಸ್ಥಿರ ಸರ್ಕಾರವನ್ನು ಸ್ಥಾಪಿಸುತ್ತದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಾಂಬಿ ಸಿಡಿಸಿದ್ದಾರೆ.ಬಿಜೆಪಿಗೆ ಮ್ಯಾಜಿಕ್ ಸಂಖ್ಯೆ ಮುಟ್ಟಿ, ಸರ್ಕಾರ ರಚನೆ ಮಾಡಲು ಸಾಧ್ಯವಾಗುವುದಿಲ್ಲ. ಕಾಂಗ್ರೆಸ್ ಚುನಾವಣೆ ನಂತರ ದುರ್ಬಲವಾಗಿ ಹೊರಹೊಮ್ಮಲಿದೆ. ತೃತೀಯ ರಂಗಕ್ಕೆ ಸಂಬಂಧಿಸಿದ ಪಕ್ಷಗಳು ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಪಡೆಯಲಿದ್ದು, ಮುಂದಿನ ಸರ್ಕಾರವನ್ನು ಸ್ಥಾಪಿಸುತ್ತದೆ ಎಂದು ಅಖಿಲೇಷ್ ಯಾದವ್ ಸಂದರ್ಶನದಲ್ಲಿ ತಿಳಿಸಿದರು.

ತೃತೀಯ ರಂಗ ಸ್ಥಿರವಾಗಿರುತ್ತದೆಯೇ ಎಂಬ ಪ್ರಶ್ನೆಗೆ , ದೇಶದಲ್ಲಿ ಪ್ರಜಾಪ್ರಭುತ್ವ ಪರಿಪಕ್ವವಾಗಿದೆ. ಅಹಂನಿಂದಾಗಿ ಯಾವುದೇ ಮೈತ್ರಿಕೂಟ ಒಡೆಯುವುದಿಲ್ಲ. ಈ ಬಾರಿ ತೃತೀಯ ರಂಗ ಸ್ಥಿರ ಸರ್ಕಾರ ಸ್ಥಾಪಿಸುತ್ತದೆ ಎಂದು ಯಾದವ್ ಹೇಳಿದರು.ಕಾಂಗ್ರೆಸ್‌ಗೆ ಬೆಂಬಲ ನೀಡುವ ಬಗ್ಗೆ, ಸಮಾಜವಾದಿ ಚಿಂತಕ ರಾಮ ಮನೋಹರ್ ಲೋಹಿಯಾ , ಕಾಂಗ್ರೆಸ್ ದುರ್ಬಲ ಸ್ಥಾನದಲ್ಲಿದ್ದಾಗ ಸಮಾಜವಾದಿಗಳಿಗೆ ಬೆಂಬಲ ನೀಡುತ್ತದೆ. ಪ್ರಸಕ್ತ ಚುನಾವಣೆಯಲ್ಲಿ ಪರಿಸ್ಥಿತಿ ಹಾಗೇ ಕಾಣುತ್ತದೆ. ಇದರಿಂದಾಗಿ ಕಾಂಗ್ರೆಸ್ ಜಾತ್ಯತೀತ ಸರ್ಕಾರ ರಚನೆಗೆ ನೆರವಾಗುತ್ತದೆ ಎಂದು ಬಾಂಬ್ ಸಿಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ