ಪ್ರಿಯಾಂಕಾ ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ - ವರುಣ ಗಾಂಧಿ

ಬುಧವಾರ, 16 ಏಪ್ರಿಲ್ 2014 (09:37 IST)
ಸೋದರ ಸಂಬಂಧಿ ಪ್ರಿಯಾಂಕಾ ಗಾಂಧಿ ತನ್ನ ಮೇಲೆ ಮಾಡಿರುವ ಟೀಕೆಗೆ ಪ್ರತಿಯಾಗಿ ಮೌನ ಮುರಿದಿರುವ ವರುಣ್ ಗಾಂಧಿ "ಅವರು ಸಭ್ಯತೆಯ ಲಕ್ಷ್ಮಣ ರೇಖೆಯನ್ನು ದಾಟಿದ್ದಾರೆ ಬೇರೆಯವರ ನಿಲುವನ್ನು ಕೆಳಗಿಳಿಸಿ, ಯಾರೂ ಕೂಡ ತಮ್ಮ ನಿಲುವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ" ಪ್ರತ್ಯಾರೋಪ ಮಾಡಿದ್ದಾರೆ.
PTI

"ನನ್ನ ಸಭ್ಯತೆ ಮತ್ತು ಉದಾರ ಹೃದಯತೆಯನ್ನು ನನ್ನ ದುರ್ಬಲತೆ ಎಂದು ತಿಳಿದು ಕೊಳ್ಳಬೇಡಿ" ಎಂದು ವರುಣ ಹೇಳಿದ್ದಾರೆ.

ಸುಲ್ತಾನಪುರದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಮತ್ತೆ ರೋಡ್ ಶೋ ನಡೆಸಿದ ಅವರು ಮೋದಿ ನೇತೃತ್ವವನ್ನು ಕೊಂಡಾಡಿದರು. ಕಳೆದ ಒಂದು ತಿಂಗಳಿಂದ ಚುನಾವಣಾ ಪ್ರಚಾರ ನಡೆಸುತ್ತಿರುವ ವೇಳೆ ಮೋದಿಯ ಹೆಸರನ್ನು ಪ್ರಸ್ತಾಪಿಸದ ವರುಣ್ ಈ ಬಾರಿ ಗುಜರಾತ್ ಮುಖ್ಯಮಂತ್ರಿ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಮೇಲ್ಜಾತಿಯ ಮತ್ತು ಒಬಿಸಿ ಸಮುದಾಯದ ನಾಲ್ವರು ವರುಣ್ ನಾಮಪತ್ರಕ್ಕೆ ಪ್ರಸ್ತಾವಕರ ರೂಪದಲ್ಲಿ ಸಹಿ ಮಾಡಿದರು. ಸಾಮಾನ್ಯ ಸಭೆಗಳ ಸಮಯದಲ್ಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿರುವ ವರುಣ್ ತನ್ನ ತಂದೆಯ ಸಂಜಯ್ ಗಾಂಧಿ ಹೆಸರನ್ನು ಮತ್ತೆ ಮತ್ತೆ ಉಲ್ಲೇಖಿಸಿದರು.

ಸಭ್ಯತೆ ಮತ್ತು ಶಿಷ್ಟಾಚಾರದ ರಾಜಕೀಯದಲ್ಲಿ ತಮ್ಮ ಬದ್ಧತೆಯನ್ನು ಕುರಿತು ಮಾತನಾಡಿದ ಗಾಂಧಿ "ತಮ್ಮ ಕುಟುಂಬದ ಸದಸ್ಯರು ಮತ್ತು ವಿರೋಧ ಪಕ್ಷದ ನಾಯಕರ ವಿರುದ್ಧ ನಾನು ಸಭ್ಯತೆಯ ಗಡಿಯನ್ನು ಎಂದಿಗೂ ಉಲ್ಲಂಘಿಸಿಲ್ಲ" ಎಂದು ಹೇಳಿದರು.

ಹಾಲಿ ಪಿಲಿಭಿಟ್ ಸಂಸದರಾಗಿರುವ ವರುಣ್, ಈ ಬಾರಿ ಸುಲ್ತಾನಪುರ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಅವರ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ತಮ್ಮ ಸಹೋದರ ರಾಹುಲ್ ನಾಮಪತ್ರ ಸಲ್ಲಿಸುವ ವೇಳೆ ವರುಣ ಆಯ್ದುಕೊಂಡಿರುವ ದಾರಿ ಸರಿ ಇಲ್ಲ ಎಂದು ಪ್ರಿಯಾಂಕಾ ಹೇಳಿದ್ದರು.

"ನಿಶ್ಚಿತವಾಗಿ ವರುಣ್ ನಮ್ಮ ಪರಿವಾರದವರು.ಅವರು ನಮ್ಮ ಸಹೋದರ. ಆದರೆ ಅವರು ಹಾದಿ ತಪ್ಪಿದ್ದಾರೆ. ಕುಟುಂಬದವರು ಯಾರಾದರೂ ತಪ್ಪು ಹಾದಿ ತುಳಿದಾಗ, ಹಿರಿಯವರು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ. ನನ್ನ ಸಹೋದರನಿಗೂ ಸರಿಯಾದ ದಾರಿ ತೋರಿಸಿ ಎಂದು ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುತ್ತೇನೆ" ಎಂದು ಪ್ರಿಯಾಂಕಾ ಹೇಳಿದ್ದರು.

ವೆಬ್ದುನಿಯಾವನ್ನು ಓದಿ