20 ಕೋಟಿ ಆಸ್ತಿಯ ಒಡೆಯ ವರುಣ ಗಾಂಧಿ

ಬುಧವಾರ, 16 ಏಪ್ರಿಲ್ 2014 (11:44 IST)
ಸುಲ್ತಾನಪುರದಿಂದ ಲೋಕಸಭೆಗೆ ನಾಮಪತ್ರವನ್ನು ಸಲ್ಲಿಸಿದ ಬಿಜೆಪಿ ನಾಯಕ ವರುಣ್ ಗಾಂಧಿ ಅದರ ಜತೆ ಸಲ್ಲಿಸಿದ ಅಫ್‪ಡವಿಟ್‌ನಲ್ಲಿ ತಮ್ಮ ಬಳಿ ಸುಮಾರು 20 ಕೋಟಿ ಆಸ್ತಿ ಇದೆ ಎಂದು ಮಾಹಿತಿ ಕೊಟ್ಟಿದ್ದಾರೆ.
PTI

ಅವರು ಸಲ್ಲಿಸಿರುವ ಅಫಿಡವಿಟ್ ಒದಗಿಸಿದ ವಿವರಗಳ ಪ್ರಕಾರ ವರುಣ್, ಒಟ್ಟು ರೂ 19,96 ಕೋಟಿ ಆಸ್ತಿ ಮತ್ತು ಅವರ ಪತ್ನಿ ಯಾಮಿನಿ ರೂ 11,88 ಲಕ್ಷ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಅವರ ಬ್ಯಾಂಕ್ ಖಾತೆಯಲ್ಲಿ 11 ಕೋಟಿಗಿಂತ ಅಧಿಕ ರೂಪಾಯಿ ಜಮಾ ಆಗಿದ್ದು 3.33 ಕೋಟಿ ಮೌಲ್ಯದ ಸ್ಟಾಕ್ ಬ್ಯಾಂಡ್‌, 31,53 ಲಕ್ಷ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮತ್ತು ಜೀವ ವಿಮೆಯಿದ್ದು, ಪತ್ನಿ ಯಾಮಿನಿ ಬ್ಯಾಂಕ್ ಖಾತೆಯಲ್ಲಿ ರೂ 3.63 ಲಕ್ಷ ರೂಪಾಯಿಗಳಿವೆ.

ಬಿಜೆಪಿಯ ಯುವ ನೇತಾರನ ಬಳಿ ಒಂದು ಗನ್, ಒಂದು ಬಂದೂಕು ಮತ್ತು ಒಂದು ಪಿಸ್ತೂಲ್ ಇದ್ದು, ದೆಹಲಿಯಲ್ಲಿ ಸ್ವಂತ ಮನೆ ಇದೆ. ಆದರೆ ಅವರ ಬಳಿ ಕಾರಿಲ್ಲ.

4.15 ಕೋಟಿ ರೂ ಗಳನ್ನು ಎಲ್ಲೋ ಒಂದು ಕಡೆ ಅಡ್ವಾನ್ಸ್ ನೀಡಿದ್ದಾಗಿ ತಮ್ಮ ಅಫಿಡವಿಟ್‌ಲ್ಲಿ ಹೇಳಿರುವ ಅವರು ತಾವು ಸಾಲವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.

ವರುಣ್, 1334,5 ಗ್ರಾಂ ಚಿನ್ನ ಮತ್ತು 113,78 ಕೆಜಿ ಬೆಳ್ಳಿಯನ್ನು ಹೊಂದಿದ್ದು, 2009 ರಿಂದ ಅವರು ಚಿನ್ನ - ಬೆಳ್ಳಿಯನ್ನು ಖರೀದಿಸಿಲ್ಲ. ತಮ್ಮ ಬಳಿ ಕೃಷಿ ಭೂಮಿ ಅಥವಾ ಪೂರ್ವಜರ ಆಸ್ತಿಯಿಲ್ಲ ಎಂದು ಅವರು ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ