ರಾಬರ್ಟ್ ವಾದ್ರಾ ಸಿದ್ಧಾಂತ ಏನು?: ಪ್ರಿಯಾಂಕಾರನ್ನು ಪ್ರಶ್ನಿಸಿದ ಮೇನಕಾ ಗಾಂಧಿ

ಬುಧವಾರ, 16 ಏಪ್ರಿಲ್ 2014 (17:10 IST)
ವರಸೆಯಲ್ಲಿ ತಮ್ಮ ಮಗಳಾದ ಪ್ರಿಯಾಂಕಾ ಗಾಂಧಿ ಮೇಲೆ ತೀಕ್ಷ್ಣ ದಾಳಿ, ನಡೆಸಿರುವ ಬಿಜೆಪಿ ನಾಯಕಿ ಮೇನಕಾ ಗಾಂಧಿ, "ನನ್ನ ಮಗ ವರುಣ ಗಾಂಧಿ ಅಥವಾ ಬಿಜೆಪಿ ಸಿದ್ಧಾಂತಗಳಿಗೆ ಟೀಕೆ ಮಾಡುವುದರ ಮೊದಲು ಆಕೆಯ ಪತಿ ರಾಬರ್ಟ್ ವಾದ್ರಾ ಸಿದ್ಧಾಂತವೇನೆಂದು ಪ್ರಿಯಾಂಕಾ ಕಂಡುಕೊಳ್ಳಲಿ" ಎಂದು ಹೇಳಿದ್ದಾರೆ.
PTI

ಖಾಸಗಿ ಸುದ್ದಿವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಫಿಲಿಭಿಟ್‌ನ ಬಿಜೆಪಿ ಅಭ್ಯರ್ಥಿ," ತುಂಬ ಭಯಪಟ್ಟು ಕೊಂಡಿದ್ದಾಗ ಜನರು ಏನು ಬೇಕಾದರೂ ಮಾತನಾಡುತ್ತಾರೆ" ಎಂದು ಹೇಳಿದರು. ಮೊದಲು ಅವರು ವರುಣ ಬಗ್ಗೆ ಪ್ರಿಯಾಂಕಾ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರಾದರೂ, ನಂತರ "ಪ್ರಿಯಾಂಕಾ, ತನ್ನ ಪತಿ ರಾಬರ್ಟ್ ವಾದ್ರಾ ಜತೆ, ಆತನ ಸಿದ್ಧಾಂತವೇನೆಂದು ಕಂಡುಕೊಳ್ಳಲಿ. ನಂತರ ಅವಳು ಬಿಜೆಪಿ ವರುಣ ಗಾಂಧಿ ಸಿದ್ಧಾಂತದ ಬಗ್ಗೆ ಮಾತಾಡಲಿ. ವಾದ್ರಾರವರ ಸಿದ್ಧಾಂತವನ್ನು ತಿಳಿದುಕೊಂಡ ನಂತರ ಆಕೆ ಎರಡು ಸಿದ್ಧಾಂತಗಳ ನಡುವಿನ ವ್ಯತ್ಯಾಸವನ್ನು ಅರಿತು ಕೊಳ್ಳಲು ಸಾಧ್ಯ "ಎಂದು ಗುಡುಗಿದ್ದಾರೆ.

"ನನ್ನ ತಂದೆ ರಾಜೀವ್ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದರು. ವರುಣ ಮತ್ತು ಅವರ ಪಕ್ಷದ ಸಿದ್ಧಾಂತ ದೇಶವನ್ನು ಒಡೆಯುವುದಾಗಿದೆ" ಎಂದು ಪ್ರಿಯಾಂಕಾ ಗಾಂಧಿ ಇತ್ತೀಚಿಗೆ ಆರೋಪಿಸಿದ್ದರು.

ಕಾಂಗ್ರೆಸ್ ಗಾಂಧಿ ಮತ್ತು ಬಿಜೆಪಿಯ ಗಾಂಧಿ ನಡುವೆ ಮೂಲಭೂತ ವ್ಯತ್ಯಾಸ ಏನು ಎಂದು ಕೇಳಿದಾಗ, ಮೇನಕಾ ಗಾಂಧಿ "ನಾವು ಬೇರೆ ಬೇರೆ ರೀತಿಯ ಜನ ಮತ್ತೂ ಹೆಚ್ಚಿಗೆ ನಾನೇನನ್ನೂ ಹೇಳಲು ಬಯಸುವುದಿಲ್ಲ" ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ