ಜಸ್ವಂತ್ ಸಿಂಗ್‌ರಿಗೆ ನಕಲಿ ಮತದಾನದ ಭಯ

ಗುರುವಾರ, 17 ಏಪ್ರಿಲ್ 2014 (10:45 IST)
ಬಿಜೆಪಿಯಿಂದ ಉಚ್ಛಾಟಿಸಲ್ಪಟ್ಟಿರುವ ಮಾಜಿ ಕೇಂದ್ರ ಮಂತ್ರಿ ಜಸ್ವಂತ್ ಸಿಂಗ್ ಇಂದು ಮುಂಜಾನೆ ಮತದಾನ ಪ್ರಾರಂಭವಾಗುವ ಮುನ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ದೂರನ್ನು ದಾಖಲಿಸಿದರು. ತನ್ನ ಬೆಂಬಲಿಗರಿಗೆ ರಾಜ್ಯ ಪೋಲಿಸರು ಹಿಂಸೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
PTI

ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿಗರು ಮತಗಟ್ಟೆಗಳಲ್ಲಿ ಅಕ್ರಮ ಪ್ರವೇಶ ಮಾಡಿದ್ದಾರೆ ಮತ್ತು ನಕಲಿ ಮತದಾನ ಮಾಡುತ್ತಿದ್ದಾರೆ ಎಂಬ ಭಯವನ್ನು ಅವರು ವ್ಯಕ್ತ ಪಡಿಸಿದ್ದಾರೆ.

ಬ್ಯಾತು ಮತ್ತು ಗುಡಾಮಲಾನಿ ಮತಗಟ್ಟೆಗಳನ್ನು ಅತ್ಯಂತ ಸೂಕ್ಷ್ಮ ಎಂದು ಘೋಷಿಸಲು ಅವರು ಆಯೋಗಕ್ಕೆ ಮನವಿ ಮಾಡಿದರು.

ಬಾಡಮೇರ್ ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿರುವ ಜಸ್ವಂತ್ ಮತ್ತು ಅವರ ಮಾತೃ ಪಕ್ಷದಿಂದ ಕಣಕ್ಕಿಳಿದಿರುವ ಕರ್ನಲ್ ಸೋನಾರಾಮ್ ನಡುವೆ ಜಿದ್ದಾಜಿದ್ದಿನ ಕದನವನ್ನು ನಿರೀಕ್ಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ