ಲೋಕಸಭೆ ಚುನಾವಣೆ ಸಮರ: ಚುನಾವಣೆ ಕಣದಲ್ಲಿದ್ದಾರೆ ಅಪರಾಧಿಗಳು

ಗುರುವಾರ, 17 ಏಪ್ರಿಲ್ 2014 (11:42 IST)
PR
ಇಂದು ನಡೆಯುತ್ತಲಿರುವ ಲೋಕಸಭಾ ಚುಣಾವಣೆಯಲ್ಲಿ ಸಾಕಷ್ಟು ಅಭ್ಯರ್ಥಿಗಳು ಅಪರಾಧಿಗಳು ಕಣದಲ್ಲಿ ಇದ್ದಾರೆ. ಶರದ್ ಪವಾರ್‌ ಪಕ್ಷವಾದ ಎನ್‌ಸಿಪಿಯ ಮೂರು ಅಭ್ಯರ್ಥಿಗಳ ಮೇಲೆ ಕೇಸು ದಾಖಲಾಗಿದೆ ಮತ್ತು ಈ ಕುರಿತು ತನಿಖೆ ನಡೆಯುತ್ತಿದೆ. ಸ್ವಚ್ಛ ಆಡಳಿತ ನೀಡುತ್ತೇವೆ ಎಂದು ಹೇಳುವ ಆಪ್ ಪಕ್ಷದಲ್ಲಿ ಕೂಡ ಅಪರಾದ ಕೃತ್ಯದಲ್ಲಿ ತೊಡಗಿದ ಆರೋಪಿಗಳಿದ್ದಾರೆ.

ಒಟ್ಟು 121 ಕ್ಷೇತ್ರಗಳಲ್ಲಿ ಕಣದಲ್ಲಿರುವ 1761 ಉಮೇದುವಾರಲ್ಲಿ 279 ಅಭ್ಯರ್ಥಿಗಳ ಮೇಲೆ ಕೇಸ್‌ ದಾಖಲಾಗಿವೆ ಮತ್ತು ತನಿಖೆ ಕೂಡ ನಡೆಯುತ್ತಿದೆ.

ಶೇ.73 ರಷ್ಟು ಎನ್‌‌ಸಿಪಿ ಅಭ್ಯರ್ಥಿಗಳು ಅಪರಾಧ ಕೃತ್ಯದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಿಪಿಐಎಮ್‌‌ ಶೇ.59 ಮತ್ತು ಶಿವಸೇನಾ ಪಕ್ಷದ ಶೇ.57 ಉಮೇದುವಾರ ಮೇಲೆ ಕೇಸು ದಾಖಲಾಗಿದೆ ಮತ್ತು ತನಿಖೆ ಕೂಡ ನಡೆಯುತ್ತಿದೆ.

ಬಿಜೆಪಿಯ ಶೇ .29 ಮತ್ತು ಕಾಂಗ್ರೆಸ್‌‌ನ ಶೇ .22 ಉಮೇದುವಾರರ ಮೇಲೆ ತನಿಖೆ ನಡೆಯುತ್ತಿದೆ.

ಆಮ್‌ ಆದ್ಮಿ ಪಾರ್ಟಿ ಈಗ ಸಮಾಜವಾದಿ ಪಾರ್ಟಿಯನ್ನು ಹಿಂದಕ್ಕೆ ಹಾಕಿದೆ. ಆಪ್‌ನಲ್ಲಿ ಶೇ.15 ರಷ್ಟು ಮತ್ತು ಎಎಸ್‌‌‌ಪಿಯ ಶೇ.12 ಉಮೇದುವಾರು ಅಪರಾಧಿಗಳಾಗಿದ್ದು ಇವರ ಮೇಲೆ ಪೋಲಿಸ್ ತನಿಖೆ ನಡೆಯುತ್ತಿದೆ.

ವೆಬ್ದುನಿಯಾವನ್ನು ಓದಿ