ಅಣ್ವಸ್ತ್ರಗಳನ್ನು 'ಮೊದಲು ಬಳಸದಿರಲು' ಬದ್ಧನಾಗಿರುತ್ತೇನೆ: ನರೇಂದ್ರ ಮೋದಿ

ಗುರುವಾರ, 17 ಏಪ್ರಿಲ್ 2014 (13:39 IST)
ಪ್ರಧಾನಿ ರೇಸ್‌ನಲ್ಲಿ ಅಗ್ರಗಣ್ಯ ಸ್ಪರ್ಧಿಯಾಗಿರುವ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸದಿರುವ ನೀತಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.
PTI

1998 ರ ಬೇಸಿಗೆಯಲ್ಲಿ, ಪೋಕ್ರಾನ್ ಪರೀಕ್ಷೆಗಳನ್ನು ನಡೆಸಿದ ನಂತರ ಭಾರತ ತನ್ನನ್ನು ಪರಮಾಣು ಶಸ್ತ್ರಾಸ್ತ್ರಗಳ ರಾಷ್ಟ್ರ ಎಂದು ಘೋಷಿಸಿಕೊಂಡಿತ್ತು. ಆ ನಂತರ ಪಾಕಿಸ್ತಾನ ಕೂಡ ತಾನು ಪರಮಾಣು ರಾಷ್ಟ್ರ ಎಂದು ಘೋಷಿಸಿ ಕೊಂಡಿತ್ತು. ಅಂದಿನಿಂದ ಎರಡೂ ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ಮತ್ತು ಕ್ಷಿಪಣಿಗಳನ್ನು ಪರೀಕ್ಷಿಸುವ ಕೆಲಸದಲ್ಲಿ ನಿರತವಾಗಿವೆ.

"ಶಕ್ತಿಯುತವಾಗಲು ಇದು ಅವಶ್ಯ. ಆದರೆ ಯಾರನ್ನೂ ನಿಗ್ರಹಿಸಲು ಅಲ್ಲ, ಅದು ನಮ್ಮ ರಕ್ಷಣೆಗಾಗಿ " ಎಂದು ಮೋದಿ ದೂರದರ್ಶನ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಆದರೆ ಪರೀಕ್ಷೆಗಳಿಗೆ ಅನುಮತಿ ನೀಡಿ, ನಂತರ ಪರಮಾಣು ಶಸ್ತ್ರಾಸ್ತ್ರಗಳನ್ನು ನಾವೇ ಮೊದಲಾಗಿ ಬಳಸಬಾರದೆಂಬ ನಿಯಮವನ್ನು ಘೋಷಿಸಿದ ಘೋಷಿಸಿದ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೀತಿಯಂತೆ ನಿರಂತರತೆಯನ್ನು ಆಧರಿಸಿದ ನಿಯಮವನ್ನು ಮುಂದುವರೆಸುವುದಾಗಿ ಅವರು ಹೇಳಿದ್ದಾರೆ.

ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ವಾರದ ನಂತರ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಣಾಳಿಕೆಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಕೆ ಮಾಡದಿರುವ ಮತ್ತು ಕನಿಷ್ಠ ಪರಮಾಣುಗಳನ್ನು ತಯಾರಿಸುವ ಭರವಸೆಯನ್ನು ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ