ಮೋದಿ ವೈವಾಹಿಕ ಸ್ಥಿತಿಯ ಬಗ್ಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದ ಕೋರ್ಟ್

ಗುರುವಾರ, 17 ಏಪ್ರಿಲ್ 2014 (15:36 IST)
ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಮೋದಿ, ತಮ್ಮ ವೈವಾಹಿಕ ಸ್ಥಿತಿಯ ಬಗೆಗಿನ ವಿಷಯವನ್ನು ಬಿಚ್ಚಿಟ್ಟ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಅಹಮದಾಬಾದ್ ಕೋರ್ಟ್ ನಗರ ಪೋಲಿಸರಿಗೆ ಆದೇಶ ನೀಡಿದೆ.
PTI

ಮೂರು ವಾರಗಳೊಳಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಮುಖ್ಯ ಪ್ರಧಾನ ಮ್ಯಾಜಿಸ್ಟ್ರೇಟ್ ಎಂಎಂ ಶೇಖ್ ಪೊಲೀಸರಿಗೆಆದೇಶಿಸಿದ್ದಾರೆ . ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಅರ್ಜಿಯ ಮೇರೆಗೆ ಕೋರ್ಟ ಈ ಕ್ರಮ ಕೈಗೊಂಡಿದೆ.

ಮೋದಿ 2012ರ ವಿಧಾನಸಭೆಗೆ ಅಫಡವಿಟ್ ಸಲ್ಲಿಸುವ ವೇಳೆ ತಮ್ಮ ವೈವಾಹಿಕ ಸ್ಥಿತಿಯ ಬಗ್ಗೆ ಮುಚ್ಚಿಟ್ಟಿದ್ದರು. ಆ ಕಾರಣಕ್ಕೆ ಅವರ ಮೇಲೆ ಕೇಸ್ ದಾಖಲಿಸುವಂತೆ ಆಪ್ ಕಾರ್ಯಕರ್ತ ನಿಶಾಂತ್ ವರ್ಮಾ ರಾಣಿಪ್ ಪೋಲಿಸ್ ಠಾಣೆಯಲ್ಲಿ ಮನವಿ ಸಲ್ಲಿಸಿದ್ದರು.

ವಡೋದರಾದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ತಾವು ವಿವಾಹಿತರೆಂಬುದನ್ನು ಮೋದಿ ಪ್ರಥಮ ಬಾರಿ ಬಹಿರಂಗ ಪಡಿಸಿದ್ದರು.

ಇದಕ್ಕೂ ಮೊದಲು ತಾವು ಸ್ಪರ್ಧಿಸಿದ್ದ ವಿಧಾನಸಭಾ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಮೋದಿ ಪತ್ನಿಯ ಹೆಸರಿನ ಕಾಲ್ಂ‌ಲ್ಲಿ ಏನೂ ಬರೆದಿರಲಿಲ್ಲ. ಆದರೆ ನಗರದ ಪೋಲಿಸರು ಆಪ್ ಕಾರ್ಯಕರ್ತನ ಅರ್ಜಿಗೆ ಸ್ಪಂದಿಸದಿದ್ದಾಗ ಆತ ಕೋರ್ಟ ಮೆಟ್ಟಿಲೇರಿದ್ದಾನೆ.

ಮೋದಿ ವಿರುದ್ಧ ಕ್ರಮ ಕೋರಿ ಗುಜರಾತ್ ಮುಖ್ಯ ಚುನಾವಣಾ ಅಧಿಕಾರಿ ಅನಿತಾ ಕರವಾಲ್‌ರಿಗೂ ಆತ ಪತ್ರ ಬರೆದಿದ್ದಾನೆ.

ವೆಬ್ದುನಿಯಾವನ್ನು ಓದಿ