ಮೋದಿ ಬೆಂಬಲಿಗರು ದಾರಿ ತಪ್ಪಿದ ಮಕ್ಕಳು : ಕೇಜ್ರಿವಾಲ್

ಶುಕ್ರವಾರ, 18 ಏಪ್ರಿಲ್ 2014 (12:17 IST)
ವಾರಣಾಸಿಯಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ವಿರೋಧವನ್ನು ಎದುರಿಸಿದ ಆಪ್ ನಾಯಕ ಕೇಜ್ರಿವಾಲ್ ಮೋದಿ ಬೆಂಬಲಿಗರು ದಾರಿ ತಪ್ಪಿದ ಮಕ್ಕಳು ಎಂದು ಛೇಡಿಸಿದ್ದಾರೆ.
PTI

ಕೇಜ್ರಿವಾಲ್‌ರಿಗೆ ಕಾಲಿಟ್ಟಲ್ಲೆಲ್ಲ ವಿರೋಧ ವ್ಯಕ್ತವಾಗುವುದು ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಂದು ಬೆಳಿಗ್ಗೆ ತಮ್ಮ ಸಮರ್ಥಕರ ಜತೆ ಚರ್ಚೆ ನಡೆಸಲು ಹೋಗಿದ್ದ ಅವರಿಗೆ ಭಾರೀ ವಿರೋಧವನ್ನು ಎದುರಿಸುವಂತಾಯಿತು. ಈ ಬಾರಿ ಅವರನ್ನು ಅಡ್ಡಗಟ್ಟಿದ್ದು ಮೋದಿ ಬೆಂಬಲಿಗರು.

ಕೇಜ್ರಿವಾಲ್ ಇಂದು ವಾರಣಾಸಿಯಲ್ಲಿ ತಮ್ಮ ಸಮರ್ಥಕರ ಜತೆ ಚರ್ಚೆಯನ್ನು ಪ್ರಾರಂಭಿಸುತ್ತಿದ್ದಂತೆ ಮೋದಿ-ಮೋದಿ ಎಂದು ಕೂಗುತ್ತ ಮೋದಿ ಸಮರ್ಥಕರು ಆ ಸ್ಥಳಕ್ಕೆ ಆಗಮಿಸಿದರು. ಆಗ ಅಲ್ಲಿದ್ದ ಆಪ್ ಕಾರ್ಯಕರ್ತರು ಕೇಜ್ರಿವಾಲ್ ಪರ ಘೋಷಣೆ ಕೂಗ ತೊಡಗಿದರು.

ಇದಕ್ಕೂ ಮೊದಲು ವಾರಣಾಸಿಯ ಲಂಕಾ ಪ್ರದೇಶದಲ್ಲಿ ಕೇಜ್ರಿವಾಲ ಸಭೆ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ಆಪ್ ಕಾರ್ಯಕರ್ತರ ನಡುವೆ ವಿವಾದ ವಾಗಿತ್ತು. ಆ ಸಮಯದಲ್ಲಿ ಪೋಲಿಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದರು

ಈ ವಿರೋಧದ ಕುರಿತು ಪ್ರತಿಕ್ರಿಯಿಸಿರುವ ಕೇಜ್ರಿವಾಲ್ ನಾವು ದ್ವೇಷದ ರಾಜಕಾರಣವನ್ನು ಪ್ರೀತಿಯಿಂದ ಬದಲಾಯಿಸುತ್ತೇವೆ. "ಮೋದಿ ಸಮರ್ಥಕರು ದಾರಿ ತಪ್ಪಿದ ಮಕ್ಕಳು. ಅವರು ನನ್ನ ಜತೆ ಮಾತುಕತೆಗೆ ಬರಲಿ. ನಾನು ಅವರ ವಿರೋಧಕ್ಕೆ ಉತ್ತರ ನೀಡಲು ತಯಾರಿದ್ದೇನೆ" ಎಂದು ಹೇಳಿದ್ದಾರೆ.

ಲಂಕಾ ಪ್ರದೇಶದಲ್ಲಿ ವಿರೋಧ ವ್ಯಕ್ತವಾದಾಗ ಕೇಜ್ರಿವಾಲ್ ತಮ್ಮ ವಿರೋಧಿಗಳ ಮೇಲೆ ಹೂವನ್ನು ಸುರಿಸಿ ಗಾಂಧಿಗಿರಿಯನ್ನು ತೋರಿಸಿದ್ದರು.

ವೆಬ್ದುನಿಯಾವನ್ನು ಓದಿ