ನರೇಂದ್ರ ಮೋದಿ ಪ್ರಧಾನಿಯಾದ್ರೆ ದೇಶ ದಂಗೆಗಳ ತಾಣ : ಮಾಯಾವತಿ ವಾಗ್ದಾಳಿ

ಶುಕ್ರವಾರ, 18 ಏಪ್ರಿಲ್ 2014 (18:17 IST)
ಬಿಜೆಪಿ ಪರವಾಗಿ ಮತ ನೀಡುವುದರಿಂದ ದೂರ ಉಳಿಯುವಂತೆ ಜನರನ್ನು ಕೇಳಿಕೊಂಡಿರುವ, ಬಿಎಸ್ಪಿ ನಾಯಕಿ ಮಾಯಾವತಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮತ್ತು ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದರೆ ದೇಶ ದಂಗೆಗಳ ತಾಣವಾಗುತ್ತದೆ ಎಂದು ಆರೋಪಿಸಿದ್ದಾರೆ.
PTI

ಕಾನ್ಪುರದ ರೈಲ್ ಬಜಾರನಲ್ಲಿ ತನ್ನ ಪಕ್ಷದಿಂದ ಕಣಕ್ಕಿಳಿದಿರುವ ಅಕ್ಬರಪುರ್ ಮತ್ತು ಮಿಶ್ರಿಕ್ ಮತ್ತು ಕಾನ್ಪುರದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದ ವೇಳೆ ಅವರು ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ನಿಮ್ಮ ಮತಗಳನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ವಿಭಾಗಿಸಬೇಡಿ. ಇದರ ನೇರ ಲಾಭ ಬಿಜೆಪಿಗೆ ಆಗುತ್ತದೆ. ಹಾಗೆ ಆದರೆ ಬಿಜೆಪಿ ಮತ್ತು ಮೋದಿ ಅಧಿಕಾರಕ್ಕೆ ಬರುತ್ತಾರೆ. ಆಗ ದೇಶ ಕೋಮುದಂಗೆಗಳಿಂದ ಪಾಳು ಬೀಳುತ್ತದೆ" ಎಂದು ಅವರು ಹೇಳಿದ್ದಾರೆ.

ತನ್ನ 30 ನಿಮಿಷಗಳ ಭಾಷಣದಲ್ಲಿ ಬಿಎಸ್ಪಿ ನಾಯಕಿ ತನ್ನ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದರ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವಂತೆ ಕೇಳಿಕೊಂಡಿದ್ದಾರೆ.

ಎಸ್ಪಿ ನೇತೃತ್ವದ ರಾಜ್ಯ ಸರ್ಕಾರದ ಮೇಲೆ ಕೂಡ ದಾಳಿ ಮಾಡಿದ, ಮಾಯಾವತಿ "ಅವರದು ಅಪರಾಧಿಗಳ, ಮಾಫಿಯಾ ಮತ್ತು ಭ್ರಷ್ಟರ ಸರಕಾರ. ತನ್ನ ಸರ್ಕಾರ ಅಧಿಕಾರದಲ್ಲಿದ್ದಾಗ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸಲಾಗಿತ್ತು ಮತ್ತು ಆ ಅವಧಿಯಲ್ಲಿ ಯಾವುದೇ ದಂಗೆಗಳು ನಡೆದಿರಲಿಲ್ಲ" ಎಂದು ತಿಳಿಸಿದ್ದಾರೆ.

ಬಿಎಸ್‌ಪಿ ಪಕ್ಷದಂತೆ ಯಾವ ಪಕ್ಷ ಕೂಡ ಲೋಕಸಭಾ ಚುನಾವಣೆಗೆ ಮುಸ್ಲಿಂ ಮತ್ತು ಬ್ರಾಹ್ಮಣ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖೆಯಲ್ಲಿ ಕಣಕ್ಕಿಳಿಸಿಲ್ಲ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ