ಮುಲಾಯಂ ರೇಪಿಸ್ಟ್‌ಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ : ಮೋದಿ ಲೇವಡಿ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ವಿರುದ್ಧ ಹರಿಹಾಯ್ದಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಾಮಾನ್ಯವಾಗಿ ಎಲ್ಲರೂ ಅತ್ಯಾಚಾರಿಗಳ ವಿರುದ್ಧ ಕಠಿಣ ನಿಲುವನ್ನು ಹೊಂದಿದ್ದರೆ, ಮುಲಾಯಂ ಸಿಂಗ್, ಮೃದುತ್ವವನ್ನು ಹೊಂದಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
PTI

ಪ್ರಚಾರ ಒಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಮೋದಿ "ನಾವು ರೇಪಿಸ್ಟ್‌ಗಳ ಬಗ್ಗೆ ಕಾಠಿಣ್ಯತೆಯನ್ನು ಹೊಂದಿರಬೇಕು. ಆದರೆ ಮುಲಾಯಂ ಸಿಂಗ್ ಬಹಳ ಮೃದು ಧೋರಣೆ ಹೊಂದಿದ್ದಾರೆ" ಎಂದು ಹೇಳಿದರು.

ಕಳೆದ ವಾರ ಸಭೆಯೊಂದರಲ್ಲಿ ಮಾತನಾಡುತ್ತ ಸಿಂಗ್ 'ಗಂಡು ಮಕ್ಕಳು ತಪ್ಪು ಮಾಡುತ್ತಾರೆ. ಆದರೆ ಅವರು ಅತ್ಯಾಚಾರ ಮಾಡಿದರೆ ಗಲ್ಲಿಗೇರಿಸುವುದು ಸರಿಯಲ್ಲ' ಎಂದು ಹೇಳಿದ್ದರು. ಈ ಹೇಳಿಕೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು.

ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್ಪಿ ಮೇಲೆ ದಾಳಿ ನಡೆಸಿರುವ , ಮೋದಿ " ಈ ಪಕ್ಷಗಳ ನಾಯಕರು, ಆನೆ ಉದ್ಯಾನಗಳನ್ನು ನಿರ್ಮಿಸುತ್ತಿದ್ದಾರೆ, ಸಿಂಹದ ಮೇಲೆ ಸಫಾರಿ ಮಾಡುತ್ತಿದ್ದಾರೆ. ಆದರೆ ಜನರಿಗಾಗಿ ಅವರಿಗೆ ಸಮಯ ಇಲ್ಲ " ಎಂದು ಮೂದಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ