ನವೆಂಬರ್ 2ಕ್ಕೆ ಅಬುದಾಬಿಯಲ್ಲಿ ಅದ್ದೂರಿ ಕರ್ನಾಟಕ ರಾಜ್ಯೋತ್ಸವ

ಶನಿವಾರ, 27 ಅಕ್ಟೋಬರ್ 2012 (13:22 IST)
PR
ಕಳೆದ 26 ವರ್ಷಗಳಿಂದ ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಾ ಯು.ಎ.ಇಯ ಕನ್ನಡಿಗರ ಸಂಘಟನೆಗಳಲ್ಲಿ ಮುಂಚೂಣಿಯ ಹೆಸರಾಗಿರುವ ಅಬುದಾಬಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವವನ್ನು ಇದೇ ಶುಕ್ರವಾರ, ನವೆಂಬರ್ 2ರಂದು ಅಬುದಾಬಿಯ ಇಂಡಿಯಾ ಸೋಶಲ್ & ಕಲ್ಚ್ ರಲ್ ಸೆಂಟರ್ ನಲ್ಲಿ ವಿಜ್ರಂಭಂಣೆಯಿಂದ ಆಚರಿಸಲಿದೆ.

ಭಾರತದ ಯು.ಎ.ಇಯ ರಾಯಭಾರಿ ಎಮ್.ಕೆ. ಲೋಕೇಶ್ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಹಾಗೂ ಖ್ಯಾತ ಜನಪ್ರಿಯ ಕನ್ನಡಿಗ, ಉದ್ಯಮಿ ಬಿ.ಆರ್. ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

PR
ಬೆಂಗಳೂರಿನ ಮಹಿಳಾ ಜಾದೂಗಾರ್ ಇಂದುಶ್ರೀಯವರಿಂದ "ಮಾತನಾಡುವ ಬೊಂಬೆ ಪ್ರದರ್ಶನ" ಹಾಗು ವಿದುಷಿ ರೋಹಿಣಿ ಅನಂತ್ ತಂಡದವರಿಂದ ನೃತ್ಯ ನಾಟಕ " ಕವಿ ಕಂಡ ಕನ್ನಡ " ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 2011-2 012 ಸಾಲಿನಲ್ಲಿ 10ನೇ ಮತ್ತು 12ನೇ ( CBSE ) ತರಗತಿಯಲ್ಲಿ ಕನಿಷ್ಠ 90% ಅಂಕ ಪಡೆದ ಹಾಗು ಕ್ರೀಡಾಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಆಸಕ್ತ ಕನ್ನಡಿಗರು ಅಧಿಕ ಮಾಹಿತಿಗಾಗಿ ಸಂಘಟಕರಾದ ಸರ್ವೋತ್ತಮ ಶೆಟ್ಟಿ ಯವರನ್ನು ( [email protected] ) ಸಂಪರ್ಕಸಬಹುದು ಎಂದು ಅಬುದಾಬಿ ಕರ್ನಾಟಕ ಸಂಘದ ಪ್ರಕಟಣೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ