ಬಾಲಕೃಷ್ಣ ಗೌಡರ ವಿರುದ್ಧದ ತನಿಖೆಗೆ ತಿಂಗಳ ಗಡುವು

ಗುರುವಾರ, 27 ಅಕ್ಟೋಬರ್ 2011 (15:18 IST)
ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಎಚ್‌.ಡಿ ಬೌಲಕೃಷ್ಣಗೌಡರ ಅಕ್ರಮ ಆಸ್ತಿ ಪ್ರಕರಣದ ತನಿಖೆಗಾಗಿ 9 ತಿಂಗಳು ಕಾಲಾವಕಾಶ ಬೇಕು ಎನ್ನುವ ಲೋಕಾಯುಕ್ತ ಪೊಲೀಸರ ಮನವಿಯನ್ನು ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಒಂದು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.

ನಿವೃತ್ತ ಕೆಎಎಸ್ ಅಧಿಕಾರಿ ಬಾಲಕತೃಷ್ಣಗೌಡ 500 ಕೋಟಿ ರೂಪಾಯಿಗಳ ಅಕ್ರಮ ಆಸ್ತಿಪಾಸ್ತಿ ಹೊಂದಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಎಚ್‌.ಎನ್.ಬಾಲಕೃಷ್ಣ ಎಂಬುವವರು ಸಲ್ಲಿಸಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶರಾದ ಸುಧೀಂದ್ರ ರಾವ್ ಇಂದು ವಿಚಾರಣೆಯನ್ನು ಕೈಗೆತ್ತಿಕೊಂಡಾಗ, ತನಿಖೆಗಾಗಿ 9 ತಿಂಗಳು ಕಾಲಾವಕಾಶ ನೀಡುವಂತೆ ಕೋರಿದರು. ಲೋಕಾಯುಕ್ತ ಪೊಲೀಸರ ಕೋರಿಕೆ ಆಲಿಸಿದ ನ್ಯಾಯಾಧೀಶರು, ಕೇವಲ 1 ತಿಂಗಳೊಳಗಾಗಿ ತನಿಖೆಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿ ಪ್ರಕರಣವನ್ನು ನವೆಂಬರ್ 28 ಕ್ಕೆ ಮುಂದೂಡಿದರು.

ಇದಕ್ಕೂ ಮೊದಲು, ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆಯ ಪ್ರಗತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ