ಶ್ರೀರಾಮುಲುನಿಂದ ಬಳ್ಳಾರಿ ಜನತೆಗೆ ಮೋಸ: ಸದಾನಂದ ಗೌಡ

ಸೋಮವಾರ, 28 ನವೆಂಬರ್ 2011 (16:20 IST)
PR
ಜಿಲ್ಲೆಯ ಜನರು ಶ್ರೀರಾಮುಲುವಿನಿಂದ ಮೋಸ ಹೋಗಿದ್ದಾರೆ. ಆ ನಿಟ್ಟಿನಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸುವ ಮೂಲಕ ಗೂಂಡಾ ಪ್ರವೃತ್ತಿಗೆ ಕಡಿವಾಣ ಬೀಳಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸೋಮವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮತದಾರರು ಯಾವುದೇ ಆಮಿಷಕ್ಕೆ ಬಲಿಯಾಗದೆ ಸ್ವಹಿತಾಸಕ್ತಿಯಿಂದ ಮತ ಚಲಾಯಿಸಲಿ ಎಂದು ಕರೆ ನೀಡಿದರು.

ಬಳ್ಳಾರಿ ಜನತೆಯ ಉತ್ತಮ ನಿರ್ಧಾರದಿಂದ ಬಳ್ಳಾರಿ ಜನತೆ ಶಾಪ ವಿಮೋಚನೆಗೊಳ್ಳುವಂತಾಗಲಿದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಶ್ರೀರಾಮುಲು ಸ್ವಾಭಿಮಾನದ ಹೆಸರಿನಲ್ಲಿ ಚುನಾವಣಾ ಅಖಾಡಕ್ಕಿಳಿದಿರುವುದು ಅಧಿಕಾರದ ಆಸೆಗಾಗಿ. ತಮಗೆ ಮಂತ್ರಿಗಿರಿ ಸಿಕ್ಕಿಲ್ಲ ಎಂಬ ಅಸಮಾಧಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದರು. ನಮ್ಮಿಂದ ಈ ಮೊದಲು ಹಲವು ತಪ್ಪುಗಳಾಗಿವೆ. ಆದರೆ ಇನ್ಮುಂದೆ ಅಂತಹ ತಪ್ಪುಗಳಾಗುವುದಿಲ್ಲ. ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡರು.

ಬಳ್ಳಾರಿ ಉಪ ಚುನಾವಣಾ ಅಖಾಡದ ಪ್ರಚಾರ ರಂಗೇರಿದ್ದು, ಸೋಮವಾರ ಸಂಜೆ ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಶ್ರೀರಾಮುಲು ಕೊನೆಯ ದಿನವಾದ ಇಂದ ರೋಡ್ ಶೋ ಮಾಡಿ ತಮ್ಮ ಬಲಪ್ರದರ್ಶನ ಮಾಡಿದರು. ನವೆಂಬರ್ 30ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ