ಈಶ್ವರಪ್ಪ ಪಿತೂರಿ-ಯಡ್ಡಿ ಹೇಳಿಕೆಗೆ ನೋ ಕಮೆಂಟ್: ಸದಾನಂದ ಗೌಡ

ಶುಕ್ರವಾರ, 30 ಡಿಸೆಂಬರ್ 2011 (11:44 IST)
PR
ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಸಿ ಜೈಲಿಗೆ ಕಳುಹಿಸಿದವರು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಶುಕ್ರವಾರ ತಿಳಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅವರು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ನಾನು ಯಾವ ಆರೋಪಕ್ಕೂ ಪ್ರತಿಕ್ರಿಯೆ ನೀಡಲ್ಲ. ಆರೋಪ ಮಾಡಿದವರೇ ಉತ್ತರ ನೀಡಲಿ ಎಂದು ಈ ಸಂದರ್ಭದಲ್ಲಿ ಹೇಳಿದರು.

ಈ ಹಿಂದೆಯೇ ಪಕ್ಷದೊಳಗಿನ ಆಂತರಿಕ ಗೊಂದಲದ ಸಮಸ್ಯೆಯನ್ನು ನಿವಾರಿಸಲಾಗಿತ್ತು. ಈಗ ಉದ್ಭವವಾಗಿರುವ ಗೊಂದಲ ನಿವಾರಿಸುತ್ತೇವೆ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ, ಕೋರ್ ಕಮಿಟಿಯಲ್ಲಿ ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಾಗುವುದು ಎಂದರು.

ಈಶ್ವರಪ್ಪ ನನ್ನ ವಿರುದ್ಧ ಪಿತೂರಿ ನಡೆಸಿ 24 ದಿನಗಳ ಕಾಲ ಜೈಲುಶಿಕ್ಷೆ ಅನುಭವಿಸುವಂತೆ ಮಾಡಿದರು. ಅಷ್ಟಾದ್ರೂ ಅವರಿಗೆ ಸಮಾಧಾನ ಇಲ್ಲ. ನನ್ನ ಪಕ್ಷದಿಂದ ಹೊರಹಾಕಿ, ತಾವು ಬಿಜೆಪಿ ಕ್ಯಾಪ್ಟನ್ ಆಗಬೇಕೆಂದು ಹೊರಟಿದ್ದಾರೆಂದು ಯಡಿಯೂರಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ನೇರವಾಗಿ ಆರೋಪಿಸಿದ್ದರು.

ಅಲ್ಲದೇ ಸದಾನಂದ ಗೌಡರು ಮುಖ್ಯಮಂತ್ರಿ ಗದ್ದುಗೆ ಏರಲು ಅವಕಾಶ ಮಾಡಿಕೊಟ್ಟಿದ್ದೇ ನಾನು. ಇದೀಗ ಸದಾನಂದ ಗೌಡರು ಈಶ್ವರಪ್ಪ ಜತೆ ಸೇರಿ ನನ್ನ ವಿರುದ್ಧವೇ ಕತ್ತಿ ಮಸೆಯುತ್ತಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು.

ವೆಬ್ದುನಿಯಾವನ್ನು ಓದಿ