ಕುಮಾರಸ್ವಾಮಿ ವಿರುದ್ಧ ತನಿಖೆ ನಡೆಸಿ; ಲೋಕಾಯುಕ್ತ ಕೋರ್ಟ್ ಆದೇಶ

ಮಂಗಳವಾರ, 3 ಜನವರಿ 2012 (11:24 IST)
PR
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಚೆನ್ನಿಗಪ್ಪ ವಿರುದ್ಧ ಸಲ್ಲಿಸಲಾಗಿರುವ ಅಕ್ರಮ ಭೂಮಿ ಡಿನೋಟಿಫಿಕೇಷನ್ ದೂರು ಪ್ರಕರಣದ ತನಿಖೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ಸೋಮವಾರ ಆದೇಶ ನೀಡಿದೆ.

ಅರ್ಕಾವತಿ ಬಡಾವಣೆ ವ್ಯಾಪ್ತಿಯ ಥಣಿಸಂದ್ರದಲ್ಲಿ ಭೂಮಿ ಡಿನೋಟಿಫೈ ಮಾಡಲು ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಚಾಮರಾಜನಗರ ಮೂಲದ ಎಂ.ಎಸ್.ಮಹದೇವಸ್ವಾಮಿ ದಾಖಲಿಸಿರುವ ದೂರು ಆಧರಿಸಿ ಫೆ.6ರಂದು ತನಿಖೆ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಎಸ್ಪಿಗೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಗಡುವು ನೀಡಿದ್ದಾರೆ.

ಕುಮಾರಸ್ವಾಮಿ, ಚೆನ್ನಿಗಪ್ಪ ಸೇರಿದಂತೆ ಜಮೀನಿನ ಮೂಲ ಮಾಲೀಕರಾದ ಎ.ವಿ.ರವಿಪ್ರಕಾಶ್, ಎ.ವಿ.ಶಿವರಾಮ್ ಅವರ ಹೆಸರನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಿಂದಿನ ವರ್ಷದಲ್ಲಿ ನಾಲ್ವರು ಮಾಜಿ ಮುಖ್ಯಮಂತ್ರಿ, ಕೆಲ ಮಾಜಿ ಸಚಿವರು, ಶಾಸಕರ ವಿರುದ್ಧ ಸಲ್ಲಿಸಿರುವ ಖಾಸಗಿ ದೂರು ವಿಚಾರಣೆಯಲ್ಲಿದೆ. 2012ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಕುಮಾರಸ್ವಾಮಿ ವಿರುದ್ಧ ಮತ್ತೊಂದು ದೂರು ಸಲ್ಲಿಸಿರುವುದು ಈ ವರ್ಷವೂ ಲೋಕಾಯುಕ್ತ ನ್ಯಾಯಾಲಯಕ್ಕೆ ಮತ್ತಷ್ಟು ದೂರುಗಳು ದಾಖಲಾಗುವ ಸುಳಿವು ನೀಡಿದೆ.

ವೆಬ್ದುನಿಯಾವನ್ನು ಓದಿ