ರೆಡ್ಡಿ ವಿರುದ್ಧ ಬೆಂಗಳೂರು ಸಿಬಿಐನಿಂದ್ಲೂ ಎಫ್ಐಆರ್ ದಾಖಲು

ಸೋಮವಾರ, 27 ಫೆಬ್ರವರಿ 2012 (19:22 IST)
PR
ಅಕ್ರಮ ಗಣಿಗಾರಿಕೆ, ಗಡಿನಾಶ ಪ್ರಕರಣದಲ್ಲಿ ಹೈದರಾಬಾದ್‌ನ ಚಂಚಲಗೂಡ ಜೈಲಿನಲ್ಲಿ ಕಾಲಕಳೆಯುತ್ತಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಇದೀಗ ಬೆಂಗಳೂರು ಸಿಬಿಐ ಪೊಲೀಸರು ಕೂಡ ಸೋಮವಾರ ಎಫ್ಐಆರ್ ದಾಖಲಿಸಿದ್ದಾರೆ.

ಸಿಇಸಿಯ ವರದಿ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಸೂಚನೆಯಂತೆ ಅಕ್ರಮ ಗಣಿಗಾರಿಕೆ ಸಂಬಂಧ ಒಟ್ಟು 15 ಜನರ ವಿರುದ್ಧ ಈ ಎಫ್ಐಆರ್ ದಾಖಲಿಸಿದೆ. ಇದರಲ್ಲಿ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಹೆಸರೂ ಸೇರಿದೆ.

ನ್ಯಾಯಾಲಯ ವ್ಯಾಪ್ತಿ ಅಡಚಣೆ ಹಿನ್ನೆಲೆಯಲ್ಲಿ ಸಿಬಿಐ ಕೋರ್ಟ್ ಈ ಪ್ರಕರಣವನ್ನು ಧಾರವಾಡ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ರಾಜ್ಯ ಸರ್ಕಾರ ಈ ಎಫ್ಐಆರ್‌ಗೆ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅದರನ್ವಯ ತನಿಖೆ ನಡೆಸಿ, ವರದಿ ಸಲ್ಲಿಸಲು ಸಿಇಸಿಗೆ ಸೂಚನೆ ನೀಡಿತ್ತು.

ವೆಬ್ದುನಿಯಾವನ್ನು ಓದಿ