ರಾಜಕಾರಣಿಗಳಿಗಿಂತ ಮಠಾಧೀಶರೇ ಹೆಚ್ಚು ಭ್ರಷ್ಟರು: ನಿಡುಮಾಮಿಡಿ

ಶನಿವಾರ, 24 ಮಾರ್ಚ್ 2012 (20:24 IST)
PR
ಭ್ರಷ್ಟ ರಾಜಕಾರಣಿಗಳಿಗಿಂತ ಮಠಾಧೀಶರ ಹೆಚ್ಚು ಭ್ರಷ್ಟರಾಗಿದ್ದಾರೆ. ಹೀಗಾಗಿ ಬಹುತೇಕ ಮಠಗಳು ಬಂಡವಾಳ ಶಾಹಿಗಳ ತಾಣಗಳಾಗಿವೆ ಎಂದು ನಿಡುಮಾಮಿಡಿ ಸಂಸ್ಥಾನ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಠಮಾನ್ಯಗಳು ಈಗ ಪಾವಿತ್ರ್ಯತೆ ಕಳೆದುಕೊಂಡಿದ್ದು, ಭ್ರಷ್ಟರಿಗೆ ಮಣೆ ಹಾಕುತ್ತಿವೆಯೇ ಹೊರತು, ಬಡವರಿಗಲ್ಲ. ಹೀಗಾಗಿ ಇಂತಹ ಮಠಗಳನ್ನು ಬಹಿಷ್ಕರಿಸುವ ಅನಿವಾರ್ಯತೆ ಇದೆ ಎಂದರು.

ಪ್ರಜಾಪ್ರಭುತ್ವದ ನೆಲೆಯಲ್ಲಿ ಇರಬೇಕಿರುವ ಮಠಾಧೀಶರು ರಾಜಕಾರಣಿಗಳ ವೋಟ್‌ಬ್ಯಾಂಕ್‌ಗಳಂತೆ ವರ್ತಿಸುತ್ತಿದ್ದು, ಇದು ನಾಗರಿಕ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಅವರು ವಿಷಾದಿಸಿದರು.

ಸೋಮವಾರ ನಗರದಲ್ಲಿ ನಡೆಯಲಿರುವ ಮಡೆಸ್ನಾನ ಹಾಗೂ ಪಂಕ್ತಿಬೇಧ ನಿಷೇಧಕ್ಕೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಚಿಂತನಾಶೀಲ ಮಠಾಧೀಶರ ಹಾಗೂ ಸಾಧಕರ ಸಮಾವೇಶದ ಹಿನ್ನೆಲೆಯಲ್ಲಿ ಸಂಜೆವಾಣಿ ಜತೆ ಮಾತನಾಡಿದ ಅವರು, ಕೆಲವು ಮಠಾಧೀಶರು ಅಪರಾಧಿಗಳನ್ನು ಬೆಂಬಲಿಸುತ್ತಾರೆ. ಕಪ್ಪು ಹಣಕ್ಕೆ ಪ್ರೋತ್ಸಾಹ ನೀಡುತ್ತಾರೆ. ಇದರಿಂದ ಮಠಗಳಿಗಿದ್ದ ಘನತೆ ಕುಂದುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ