ರವಿಶಂಕರ್ ಗುರೂಜಿಯವರ ವಿರುದ್ಧ ಕಿಡಿಕಾರಿದ ನಿತ್ಯಾನಂದ

ಗುರುವಾರ, 17 ಅಕ್ಟೋಬರ್ 2013 (17:49 IST)
PR
PR
ಬೆಂಗಳೂರು: ರವಿಶಂಕರ್ ಗುರೂಜಿ ಮತ್ತು ಬಾಬಾ ರಾಮ್‌ದೇವ್ ಮೇಲೆ ವಿವಾದಿತ ಸ್ವಾಮೀಜಿ ನಿತ್ಯಾನಂದ ಕಿಡಿಕಾರಿದ್ದಾರೆ. ಶಾಂತಿ ಮಂತ್ರ ಪಠಿಸುವ ರವಿಶಂಕರ್ ಗುರೂಜಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ನಿತ್ಯಾನಂದ ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬ ಗುರುವಿಗೆ ನಿಂದಿಸಿದ್ರೆ ನೀವು ಆ ಗುರುವನ್ನು ಬಹಿಷ್ಕರಿಸಬೇಕು ಎಂದು ನಿತ್ಯಾನಂದ ಹೇಳಿದರು. ಈಗಾಗಲೇ ಅಸಾರಾಂ ಬಾಪು ಸಂಕಷ್ಟದಲ್ಲಿದ್ದಾರೆ. ಅವರ ಮೇಲೆ ವಾಗ್ದಾಳಿ ನಡೆಸುವುದು ಸರಿಯೇ, ಎಲ್ಲರನ್ನೂ ಅನುಕಂಪದಿಂದ ನೋಡಬೇಕು ಎಂದು ಹೇಳುವುದರಲ್ಲಿ ಅರ್ಥವಿದೆಯೇ, ಅಸಾರಾಮ್ ಬಾಪು ವಯಸ್ಸಾಗಿರೋ ಹಿರಿಯ ಸನ್ಯಾಸಿ. ಬಾಪು ವಿರುದ್ಧ ಮಾಧ್ಯಮಗಳಲ್ಲಿ ಬರುವ ಎಲ್ಲ ಸಂಗತಿಗಳು ಸುಳ್ಳು.

ಅನುಕಂಪ ತೋರಿಸಕ್ಕೆ ಆಗದಿದ್ರೆ ಬಾಯಿಮುಚ್ಚಿಕೊಳ್ಳಿ, ರವಿ ಶಂಕರ್ ಗುರೂಜಿ ಅವರೇ ನೀವು ಅಸಾರಾಂ ಬಾಪು ಪ್ರಭಾವಕ್ಕೆ ಒಳಗಾಗಿಲ್ಲವೇ. ಹೇಳಿಕೆ ನೀಡೋದಕ್ಕೆ ಯಾಕೆ ಇಷ್ಟು ಆತುರ ಪಡ್ತೀರಿ. ಬಾಪು ವಿರುದ್ಧ ನಿಂದನೆಗಳಲ್ಲಿ ಯಾವುದೇ ಹುರುಳಿಲ್ಲ. ರವಿಶಂಕರ್ ಗುರೂಜಿ ಧಾರ್ಮಿಕ ಸಂಸ್ಥೆಯನ್ನು ಹೊಂದಿದ್ದಾರೆಯೇ ಹೊರತು ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಿಲ್ಲ. ಮಾಧ್ಯಮಗಳಲ್ಲಿ ಇಂತಹ ಸುದ್ದಿ ಬಂದಾಗ ತಾಳ್ಮೆಯಿಂದ ಪ್ರತಿಕ್ರಿಯಿಸಬೇಕು. ಕೋರ್ಟ್ ಆದೇಶ ಬರುವ ಮೊದಲೇ ನಿಮಗೆ ಆತುರವೇಕೆ ಎಂದು ನಿತ್ಯಾನಂದ ಪ್ರಶ್ನಿಸಿದ್ದಾನೆ. ನಿತ್ಯಾನಂದನ ಹೇಳಿಕೆ ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ ಎನ್ನುವಂತಾಗಿದೆ.

ವೆಬ್ದುನಿಯಾವನ್ನು ಓದಿ