ಮೋದಿಯ ಕೈಯಲ್ಲಿ ನೆತ್ತರಿನ ಕಲೆಗಳು ಇನ್ನೂ ಅಂಟಿದೆ: ಅನಂತಮೂರ್ತಿ

ಶುಕ್ರವಾರ, 11 ಏಪ್ರಿಲ್ 2014 (18:42 IST)
PR
PR
ಬೆಂಗಳೂರು: ತಾವು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ಮೋದಿಯ ವಿರೋಧಿಯಾಗಿದ್ದರೂ, ಕಾಂಗ್ರೆಸ್‌ ಪರ ಯಾವುದೇ ರೀತಿಯ ಬೆಂಬಲ ಕೊಡುತ್ತಿಲ್ಲ ಎಂದು ಸಾಹಿತಿ ಯು.ಆರ್. ಅನಂತಮೂರ್ತಿ ಹೇಳಿದ್ದಾರೆ.ಮೋದಿ ವಿರೋಧಿ ಎಂದು ಬ್ರಾಂಡ್ ಆಗಿರುವ ಸಾಹಿತಿ ಅನಂತಮೂರ್ತಿಯ ವಿರುದ್ಧ ಬಿಜೆಪಿ ಚುನಾವಣೆ ಆಯೋಗಕ್ಕೆ ದೂರ ಕೊಟ್ಟು ಸರ್ಕಾರದ ಹುದ್ದೆಯಲ್ಲಿದ್ದು ಕಾಂಗ್ರೆಸ್ ಪರ ಚುನಾವಣೆ ಪ್ರಚಾರ ಮಾಡುತ್ತಿದ್ದಾರೆಂದು ಆರೋಪಿಸಿದ್ದರು. ನಾನು ನರೇಂದ್ರ ಮೋದಿಯನ್ನು ವಿರೋಧಿಸುವ ನಿಲುವನ್ನು ಪ್ರತಿಪಾದಿಸಿದ್ದೇನೆ. ಆದರೆ ಕಾಂಗ್ರೆಸ್ ಪರ ತಾವು ಪ್ರಚಾರ ಮಾಡುತ್ತಿಲ್ಲ.

ಏಕೆಂದರೆ ತನ್ನ ಅಧಿಕಾರಾವಧಿಯಲ್ಲಿ ಒಕ್ಕೂಟ ವ್ಯವಸ್ಥೆಯನ್ನು ನಾಶಮಾಡಿತು ಎಂದು ಅನಂತಮೂರ್ತಿ ಹೇಳಿದರು.. ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡುತ್ತಾ, ಅವರು ಕೆಟ್ಟ ಉದ್ದೇಶಗಳ, ಯಶಸ್ಸು ಗಳಿಸುವುದಕ್ಕಾಗಿ ಆಕ್ರಮಣಕಾರಿ ಮನೋಭಾವ ಹೊಂದಿದ್ದಾರೆ ಎಂದು ಅನಂತಮೂರ್ತಿ ಟೀಕಿಸಿದರು. ಆಡಳಿತದಲ್ಲಿ ಮೋದಿಯ ಸರ್ವಾಧಿಕಾರಿ ಮನೋಭಾವವನ್ನು ತಾವು ವಿರೋಧಿಸುವುದಾಗಿ ಹೇಳಿದ ಅವರು ಇದು ಅವರ ಕೈಕೆಳಗಿರುವ ಪೌರರಿಗೆ ಮತ್ತು ಆಡಳಿತಶಾಹಿಗೆ ದುಬಾರಿಯಾಗಿದೆ. ಮೋದಿ ಆಕ್ರಮಣಕಾರಿ ಮನೋಭಾವ ಹೊಂದಿದ್ದು, ನೆತ್ತರಿನ ಕಲೆಗಳು ಕೈಗಳಿಗೆ ಇನ್ನೂ ಅಂಟಿವೆ.

ಅವರು ನೆಹರು ಮತ್ತು ವಾಜಪೇಯಿ ರೀತಿಯಲ್ಲಿ ದೂರದೃಷ್ಟಿಯ ವ್ಯಕ್ತಿಯಲ್ಲ ಎಂದು ಅನಂತಮೂರ್ತಿ ಟೀಕಿಸಿದರು. ನೆಹರು, ವಾಜಪೇಯಿ ಅವರಿಗೆ ದೂರದೃಷ್ಟಿ ಮತ್ತು ಭಾರತ ಪ್ರಕಾಶಿಸುವ ನಿಶ್ಚಿತ ಗುರಿ ಹೊಂದಿದ್ದರು. ಇದಕ್ಕೆ ವಿರುದ್ಧವಾಗಿ ಮೋದಿ ಅಧಿಕಾರದ ಮೇಲೆ ಮಾತ್ರ ಗಮನಹರಿಸುತ್ತಾರೆ ಎಂದು ಅವರು ನುಡಿದರು.

ವೆಬ್ದುನಿಯಾವನ್ನು ಓದಿ