ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸಂಜೆ 6 ಗಂಟೆಗೆ ತೆರೆಬೀಳಲಿದ್ದು, ಮತದಾರರನ್ನು ಓಲೈಸಲು ನಾನಾ ರೀತಿಯ ಕಸರತ್ತನ್ನು ವಿವಿಧ ಪಕ್ಷಗಳ ಅಭ್ಯರ್ಥಿಗಳು ನಡೆಸಿದ್ದಾರೆ. ಬಿಜೆಪಿ ಇಂದು ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಕರ್ನಾಟಕಕ್ಕೆ ಪ್ರಚಾರ ಮಾಡಲಿಕ್ಕೆ ಆಹ್ವಾನಿಸಿದ್ದಾರೆ. ಪವನ್ ಕಲ್ಯಾಣ್ ಅವರ ಆಗಮನಕ್ಕಾಗಿ ಕೋಲಾರದಲ್ಲಿ ವೇದಿಕೆ ಸಿದ್ದವಾಗಿದ್ದು, ಪವನ್ ಇಲ್ಲಿಗೆ ಆಗಮಿಸಿ ಪ್ರಚಾರಕಾರ್ಯವನ್ನು ಕೈಗೊಂಡರು. ಬಿಜೆಪಿಯ ಸ್ಥಳೀಯ ಶಾಸಕರು ಮತ್ತು ರಾಜ್ಯದ ಮುಖಂಡರು ಇಲ್ಲಿಗೆ ಆಗಮಿಸಲಿದ್ದಾರೆ. ಕೋಲಾರದಲ್ಲಿ ಪ್ರಚಾರ ಮಾಡಿದ ಬಳಿಕ ಪವನ್ ಕಲ್ಯಾಣ್ ಅವರು ರಾಯಚೂರು ಮತ್ತು ಗುಲ್ಬರ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
PR
PR
ದಕ್ಷಿಣ ಕನ್ನಡದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಭ್ಯರ್ಥಿ ಜನಾರ್ದನ ಪೂಜಾರಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ದೇವೇಗೌಡರ ವಿರುದ್ಧ ಮೋದಿಯ ಹೇಳಿಕೆಯನ್ನು ಕುರಿತು ಮಾತನಾಡಿದ ಅವರು ಇದು ಉದ್ದಟತನ ಹೇಳಿಕೆ. ದೇವೇಗೌಡರು ದೇಶದ ಪ್ರಧಾನಿಯಾಗಿದ್ದವರು. ಕರ್ನಾಟಕದಲ್ಲಿ ಒಬ್ಬರೇ ಒಬ್ಬರು ದೇಶದ ಪ್ರಧಾನಿಯಾಗಿದ್ದವರು. ಸಿದ್ದಾಂತದಲ್ಲಿ ಏನೇ ವ್ಯತ್ಯಾಸವಿರಲಿ, ಯಾರು ಏನೇ ಹೇಳಲಿ ಅವರು ದೊಡ್ಡ ಹೋರಾಟಗಾರರು. ಅಂತಹವರ ವಿರುದ್ಧ ನರೇಂದ್ರ ಮೋದಿ ಅವಹೇಳನಕಾರಿಯಾಗಿ ಮಾತನಾಡಿರುವುದು ಉದ್ದಟತನದ ಪರಮಾವಧಿ ಎಂದು ಜನಾರ್ದನ ಪೂಜಾರಿ ಆರೋಪಿಸಿದ್ದಾರೆ.