ಎನ್‌ಡಿಟಿವಿ ಸಮೀಕ್ಷೆ: ಕರ್ನಾಟಕದಲ್ಲಿ ಕಾಂಗ್ರೆಸ್ 14, ಬಿಜೆಪಿ 12, ಜೆಡಿಎಸ್ 2

ಮಂಗಳವಾರ, 15 ಏಪ್ರಿಲ್ 2014 (12:57 IST)
PR
PR
ಬೆಂಗಳೂರು: 2009ರಲ್ಲಿ 19 ಸೀಟುಗಳನ್ನು ಗೆಲ್ಲುವ ಮೂಲಕ ಉತ್ತಮ ಸಾಧನೆ ಮಾಡಿದ್ದ ಬಿಜೆಪಿ ಈ ಬಾರಿ ರಾಜ್ಯದಲ್ಲಿ 7 ಸೀಟುಗಳನ್ನು ಕಳೆದುಕೊಂಡಿದ್ದು, 12 ಸೀಟುಗಳನ್ನು ಮಾತ್ರ ಗಳಿಸಲಿದೆ ಎಂದು ಎನ್‌ಡಿಟಿವಿ ಹೊಸ ಸಮೀಕ್ಷೆಯಲ್ಲಿ ತಿಳಿಸಿದೆ. ಬಿಜೆಪಿ ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರವನ್ನು ಬಿಟ್ಟುಕೊಟ್ಟಿತ್ತು. ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ 14 ಸೀಟುಗಳು, ಬಿಜೆಪಿ 12 ಸೀಟುಗಳು ಮತ್ತು ಜೆಡಿಎಸ್ 2 ಸೀಟುಗಳನ್ನು ಗೆಲ್ಲಲಿವೆ. ಎಚ್.ಡಿ.ದೇವೇಗೌಡ ಅವರ ಜನತಾದಳ(ಜಾತ್ಯತೀತ) ಎರಡು ಸೀಟುಗಳನ್ನು ಗೆಲ್ಲುವ ಸಾಧ್ಯತೆಯಿದೆ.

ಇದು ಕಳೆದ ಬಾರಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮೂರು ಸೀಟುಗಳಲ್ಲಿ ಜಯಗಳಿಸಿತ್ತು. ಕರ್ನಾಟಕದಲ್ಲಿ ಕಳೆದ ಬಾರಿ ಬಿಜೆಪಿಯ ದುರಾಡಳಿತದಿಂದ ಬೇಸತ್ತ ಜನತೆ ಕಾಂಗ್ರೆಸ್ ಪಕ್ಷವನ್ನು ಆಯ್ಕೆಮಾಡಿದ್ದರು. ಬಿಜೆಪಿಯ ಭ್ರಷ್ಟಾಚಾರದ ಆಡಳಿತ ಈಗಲೂ ಜನರ ನೆನಪಿನಿಂದ ಮಾಸಿಹೋಗಿಲ್ಲ. ಹೀಗಾಗಿ ಈ ಬಾರಿ ಬಿಜೆಪಿ‌ಗಿಂತ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ಮತದಾರರು ಆದ್ಯತೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ