ಏ. 17ರಂದು ಮತದಾನ ಹಿನ್ನೆಲೆ 48 ಗಂಟೆ ಮದ್ಯಮಾರಾಟ ನಿಷೇಧ

ಮಂಗಳವಾರ, 15 ಏಪ್ರಿಲ್ 2014 (19:36 IST)
PR
PR
ಬೆಂಗಳೂರು: ರಾಜ್ಯದಲ್ಲಿ ಏ.17ರಂದು ಚುನಾವಣೆ ಹಿನ್ನೆಲೆಯಲ್ಲಿ ಇಂದಿನಿಂದ ಬಹಿರಂಗ ಚರ್ಚೆ ಮಾಡುವಂತಿಲ್ಲ. ಇಂದಿನಿಂದ 48 ಗಂಟೆಗಳ ಕಾಲ ಮದ್ಯಮಾರಾಟವನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿಕೆ ನೀಡಿದ್ದಾರೆ. 1599 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 21.95 ಕೋಟಿ ರೂ. ನಗದುಹಣ ವಶಕ್ಕೆ ತೆಗೆದುಕೊಳ್ಳಲಾಗಿದೆ. 2.82 ಕೋಟಿ ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಝಾ ಹೇಳಿದ್ದಾರೆ.

48 ಗಂಟೆಗಳ ಕಾಲ ಮದ್ಯಮಾರಾಟಕ್ಕೆ ನಿಷೇಧ ವಿಧಿಸಿರುವ ಹಿನ್ನೆಲೆಯಲ್ಲಿ ಮದ್ಯಖರೀದಿಗೆ ಜನರು ಮುಗಿಬಿದ್ದಿದ್ದಾರೆ. 2 ದಿನಕ್ಕೆ ಸಾಕಾಗುವಷ್ಟು" ಎಣ್ಣೆ'ಯನ್ನು ಕೆಲವು ಜನರು ಖರೀದಿ ಮಾಡಿ ದಾಸ್ತಾನು ಇರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ