ಮೈಸೂರು: ಮೈಸೂರಿನ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಒಬ್ಬ ಅಪ್ರಬುದ್ಧ ರಾಜಕಾರಣಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸಿಎಂ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿದ್ದು, ಈ ಬಗ್ಗೆ ಚುನಾವಣೆ ಆಯೋಗಕ್ಕೆ ದೂರು ನೀಡುವುದಾಗಿ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಪ್ರತಾಪ್ ಸಿಂಹ ಹೇಳಿಕೆ ಹೊರಬಿದ್ದಿದೆ. ಎಚ್.ವಿಶ್ವನಾಥ್ ಪರ ಪ್ರಚಾರದ ಸಲುವಾಗಿ ರಾಮಕೃಷ್ಣನಗರದ ತಮ್ಮ ನಿವಾಸದಲ್ಲಿ ತಂಗಿರುವ ಸಿದ್ದರಾಮಯ್ಯ ಚುನಾವಣೆಗೆ ಹಣ ಸಾಗಣೆ ಮಾಡುತ್ತಿರುವ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು. ಹಣ ಸಾಗಣೆ ಬಗ್ಗೆ ಸರ್ಕಾರಿ ಯಂತ್ರದ ದುರುಪಯೋಗದ ದಾಖಲಾತಿ ಇದ್ದರೆ ಒದಗಿಸಲಿ. ಪ್ರತಾಪ್ ಸಿಂಹ ಒಬ್ಬ ಅಪ್ರಬುದ್ಧ ರಾಜಕಾರಣಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಇಂತಿಷ್ಟೇ ಸ್ಥಾನಗಳನ್ನು ಗೆಲ್ಲಿಸಿಕೊಡಬೇಕೆಂದು ಹೈಕಮಾಂಡ್ ಯಾವುದೇ ಗುರಿಯಿರಿಸಿಲ್ಲ. ಒಂದು ವೇಳೆ ಕಡಿಮೆ ಸ್ಥಾನ ಬಂದರೂ ತಾವೂ ರಾಜೀನಾಮೆ ನೀಡಬೇಕಾದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಿಎಂ ಹೇಳಿದರು.