ಲೋಕಸಭೆ ಚುನಾವಣೆ: ಕ್ಷಣ ಕ್ಷಣದ ಸುದ್ದಿಗಳ ಮಾಹಿತಿ

ಗುರುವಾರ, 17 ಏಪ್ರಿಲ್ 2014 (14:23 IST)
PTI
ಲೋಕಸಭೆ ಚುನಾವಣೆಗಾಗಿ ರಾಜ್ಯದ 29 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಆರಂಭವಾಗಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕುಟುಂಬ ಸಮೇತರಾಗಿ ಶಿವಮೊಗ್ಗದಲ್ಲಿ ಮತ ಚಲಾಯಿಸಿದ್ದಾರೆ.

ಮೈಸೂರಿನಲ್ಲಿ ಮಾಜಿ ಸಚಿವ ರಾಮದಾಸ್ ಮತದಾನ

ಮಾಜಿ ಮುಖ್ಯಮಂತ್ರಿ ಡಿಯವಿಯಸದಾನಂದಗೌಡ ಮತದಾನ

ಸಿದ್ದಗಂಗಾ ಮಠದ ಕಿರಿಯ ಶ್ರೀಗಳಿಂದ ಮತದಾನ

ಉಡುಪಿಯಲ್ಲಿ ಆಸ್ಕರ್ ಫರ್ನಾಂಡಿಸ್ ಮತದಾನ

ಭವಾನಿ ನಗರ ಮತಗಟ್ಟೆಯಲ್ಲಿ ತಾಂತ್ರಿಕ ದೋಷ

ಇಂದು 430 ಅಭ್ಯರ್ಥಿಗಳ ಹಣೆಬರಹ ನಿರ್ಧಾರ

ರಾಯಚೂರಿನಲ್ಲಿ ಚುನಾವಣೆ ಸಿಬ್ಬಂದಿ ಹಾವು ಕಡಿದು ಅಸ್ವಸ್ಥ

ಐಡಿ ಗೊಂದಲದಿಂದಾಗಿ ಮತ ಚಲಾಯಿಸಿದ ಆಪ್ ಪಕ್ಷ ನೀನಾ ನಾಯಕ್

ಮುಂಜಾನೆ 7 ಗಂಟೆಯಿಂದಲೇ ಮತದಾನ ಆರಂಭ

ಹುಬ್ಬಳ್ಳಿ, ಬೆಂಗಳೂರಿನ ಮತಯಂತ್ರಗಳಲ್ಲಿ ದೋಷ, 15 ನಿಮಿಷ ವಿಳಂಬವಾಗಿ ಮತದಾನ ಆರಂಭ

ನಟಿ ಪ್ರಣೀತಾ ಮತದಾನ ಮಾಡದೆ ವಾಪಸ್

ಬ್ಯಾಲೆಟ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಅನ್ಯಾಯ

ಬನಶಂಕರಿ ಮತಗಟ್ಟೆಯಲ್ಲಿ ಮತಯಂತ್ರ ದೋಷ

ಮತ ಚಲಾಯಿಸಿದ ಜೆಡಿಎಸ್ ಅಭ್ಯರ್ಥಿ ನಂದಿನಿ ಆಳ್ವ

ಹಾಸನದದ ಚೆನ್ನರಾಯಪಟ್ಟಣದ ಮೂರು ಮತದಾನ ಕೇಂದ್ರಗಳಲ್ಲಿ ಮತಯಂತ್ರ ದೋಷ, ಮತದಾನ ಸ್ಥಗಿತ

ಮರಿಯಣ್ಣನ ಪಾಳ್ಯದಲ್ಲಿ ನಂದಿನ ಆಳ್ವ ಮತ ಚಲಾವಣೆ

ಗುಲ್ಬರ್ಗ ಹಾಗರಗಾ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತದಾನ

ಬೆಂಗಳೂರಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಮತದಾನ

ಖೋಟಾ ನೋಟು ಹಿಡಿದು ಗ್ರಾಮಸ್ಥರ ಪ್ರತಿಭಟನೆ

ಬಿಜೆಪಿ ಅಭ್ಯರ್ಥಿ ರೇವುನಾಯಕ್ ಬೆಳಮಗಿಯಿಂದ ಮತ ಚಲಾವಣೆ

ತ್ಯಾಗರಾಜನಗರ ಪದ್ಮನಾಭ ನಗರ, ಬನಶಂಕರಿ ಇತರ ಕೆಲ ಮತಗಟ್ಟೆಗಳಲ್ಲಿ ಮತಯಂತ್ರ ದೋಷ

ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸ್ವಾಮಿ ಮತದಾನ

ಹಾವೇರಿಯಲ್ಲಿ ಮತಯಂತ್ರ ದೋಷ

ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಲ್ಲಿ ಮತದಾನ

ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿಯೊಂದಿಗೆ ಆಗಮಿಸಿ ಮತ ಚಲಾವಣೆ

ಜೆಡಿಎಸ್ ಅಭ್ಯರ್ಥಿ ಧನಂಜಯ್ ಕುಮಾರ್ ಮತ ಚಲಾವಣೆ

ಚಿತ್ರನಟ ರಮೇಶ್ ರಿಂದಲೂ ಮತದಾನ

ಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ್ ಮತಚಲಾವಣೆ

ಬಿಜೆಪಿ ಸಂಸದ ಸುರೇಶ್ ಅಂಗಡಿ ಮತದಾನ

ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಕುಟುಂಬ ಸಮೇತರಾಗಿ ಮತ ಚಲಾವಣೆ

ವಿನಯ್ ಕುಮಾರ್ ಸೊರಕೆ ಮತದಾನ

ಕಾರ್ಕಳದಲ್ಲಿ ಶಾಸಕ ಸುನೀಲ್ ಕುಮಾರ್ ಮತದಾನ

ಮಂಗಳೂರಿನಲ್ಲಿ ಮಾಜಿ ಸಿಎಂ ಸದಾನಂದಗೌಡ ಮತದಾನ

ಮೈಸೂರಿನಲ್ಲಿ ಪಡುವಾರಹಳ್ಳಿ ಗ್ರಾಮಸ್ಥರದಿಂದ ಮತದಾನ ಬಹಿಷ್ಕಾರ

ಇಂದು 434 ಅಭ್ಯರ್ಥಿಗಳ ಹಣೆಬರಹ ನಿರ್ಧಾರ

ಬೆಂಗಳೂರು ಸೆಂಟ್ರಲ್ ಅಭ್ಯರ್ಥಿ ಪಿ.ಸಿ.ಮೋಹನ್ ಮತದಾನ

ನಿಳಿನ್ ಕುಮಾರ್ ಕಟೀಲ್ ಮತದಾನ

ಹಾರಾಡಿಯಲ್ಲಿ ಡಿವಿಎಸ್ ಮತದಾನ

ಮಂಜುನಾಥ ಭಂಡಾರಿ ಮತದಾನ

ಬೆಂಗಳೂರಿನಲ್ಲಿ ಶೋಭಾ ಕರಂದ್ಲಾಜೆ ಮತಚಲಾವಣೆ

ಜೆಡಿಎಸ್ ಅಭ್ಯರ್ಥಿ ಅಜೀಂ ಮತದಾನ

ಮುರುಘಾ ಶರಣರಿಂದ ಮತದಾನ

ಮಾಜಿ ಸಚಿವ ಆರ್.ಅಶೋಕ್ ತಮ್ಮ ತಾಯಿಯೊಂದಿಗೆ ಬಂದು ಮತಚಲಾವಣೆ

ಮಾಜಿ ಸಚಿವ ಅಪ್ಪಚ್ಚು ರಂಜನ್ ಮತಚಲಾವಣೆ

ಕೊಪ್ಪಳ ಜಿಲ್ಲೆಯಲ್ಲಿ ಕೈಕೊಟ್ಟ ಮತಯಂತ್ರ

ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಹೆಗ್ಡೆ ಮತದಾನ

ಪತ್ನಿ ಜೆತ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತದಾನ

ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಮತದಾನ

ಸಿದ್ದರಾಮಯ್ಯನ ಹುಂಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾನ

ಧಾರವಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲ್ಕರ್ಣಿ ಮತದಾನ

ತೋರುಬೆರಳಿಗೆ ಶಾಹಿ ಹಾಕಿ ನೀತಿ ಸಂಹಿತೆ ಉಲ್ಲಂಘಿಸಿದ ಬೀದರ್ 101 ಮತಗಟ್ಟೆಯ ಚುನಾವಣೆ ಅಧಿಕಾರಿಗಳು

ದೇವದುರ್ಗದ ಅರಕೇರೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಮತದಾನ

ಸಚಿವ ದೇಶಪಾಂಡೆ ಪುತ್ರನೊಂದಿಗೆ ಆಗಮಿಸಿ ಮತದಾನ

ಉಡುಪಿಯಲ್ಲಿ ಪೇಜಾವರ ಶ್ರೀಗಳಿಂದ ಮತದಾನ

ಜೆಡಿಎಸ್ ಅಭ್ಯರ್ಥಿ ಬಂಡೆಪ್ಪಾ ಖಾಶೆಂಪೂರ್ ಕಿರುಬರಳಿಗೆ ಶಾಹಿ ಹಾಕಿದ ಚುನಾವಣೆ ಅದಿಕಾರಿಗಳು

ಕೋರುಬೆರಳಿಗೆ, ಕಿರುಬೆರಳಿಗೆ ಶಾಹಿ ಹಾಕುತ್ತಿರುವ ಚುನಾವಣೆ ಸಿಬ್ಬಂದಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಬಾಗಲಕೋಟೆಯ ಸಂಶಿಯಲ್ಲಿ ಅಜಯ್ ಕುಮಾರ್ ಸರನಾಯಕ್ ಮತದಾನ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ತುರುವೇಕೆರೆ ಸರ್ಕಾರಿ ಶಾಲೆಯಲ್ಲಿ ಹೃದಯಾಘಾತದಿಂದ ಚುನಾವಣೆ ಸಿಬ್ಬಂದಿ ಸಾವು

ಬಾಗಲಕೋಟೆಯಲ್ಲಿ ಸಂಸದ ಸಿದ್ದನ್‌ಗೌಡರ ಮತದಾನ

ನಂಜನಗೂಡು, ಕೊಳ್ಳೆಗಾಲದಲ್ಲಿ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಹುಲುಕೇಟೆಯಲ್ಲಿ ಕಾಂಗ್ರೆಸ್ ಮುಖಂಡ ಎಚ್‌.ಕೆ.ಪಾಟೀಲ್ ಮತದಾನ

ಕೇಂದ್ರ ಸಚಿವ ವೀರಪ್ಪಾ ಮೊಯ್ಲಿ ಪತ್ನಿ ಮಾಲತಿಯೊಂದಿಗೆ ಮತಚಲಾವಣೆ

ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಮತದಾನ

ಜೆಡಿಎಸ್ ಅಭ್ಯರ್ಥಿ ಅಬ್ದುಲ್ ಅಜೀಂ ಮತದಾನ

ಯಾದಗಿರಿಯಲ್ಲಿ ಮಂಗಳಮುಖಿಯರಿಂದ ಮತದಾನ

ಮಂಡ್ಯ ಜಿಲ್ಲೆಯ ಸುಣ್ಣದ ಹೊಡ್ಡಿ ಗ್ರಾಮದಲ್ಲಿ 750 ಮತದಾರರಿಂದ ಮತದಾನ ಬಹಿಷ್ಕಾರ, ಅಧಿಕಾರಿಗಳಿಂದ ಸಂಧಾನ

ಬೀದರ್‌ನಲ್ಲಿ ಬಂಡೆಪ್ಪಾ ಖಾಶೆಂಪೂರ್ ಮತದಾನ

ಹಾಸನದ ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಮತದಾನ

ಬೆಂಗಳೂರಿನ ಹಂಪಿನಗರದಲ್ಲಿ ಸಾಹಿತಿ ಚಿದಾನಂದಮೂರ್ತಿ ಮತದಾನ

ಬೆಳಗಾವಿಯಲ್ಲಿ ರಾಯಭಾಗ ತಾಲೂಕಿನ ಮೂಗಕೋಡಿನಲ್ಲಿ ಚುನಾವಣೆ ಸಿಬ್ಬಂದಿ ಬಾಷಿರ್ ಸಾಬ್ ಜಾರಿಯ ಸಾವು

ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ದೊಡ್ಡಹಳ್ಳಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರಿಂದ ಗುಂಪು ಘರ್ಷಣೆ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ್ ದೇಶಪಾಂಡೆ ಮತದಾನ

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪುಟ್ಟರಾಜು ಮತದಾನ

ಚಾಮರಾಜನಗರ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಶೇ.12 ರಷ್ಟು ಮತದಾನ

ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.8ರಷ್ಟು ಮತದಾನ

ಗುಲ್ಬರ್ಗಾ ಕ್ಷೇತ್ರದಲ್ಲಿ ಶೇ.6 ರಷ್ಟು ಮತದಾನ

ಬಿಜಾಪುರ ಕ್ಷೇತ್ರದಲ್ಲಿ ಶೇ.3 ರಷ್ಟು ಮತದಾನ

ಮೈಸೂರು- ಕೊಡಗು ಕ್ಷೇತ್ರದಲ್ಲಿ ಶೇ.12 ರಷ್ಟು ಮತದಾನ

ಚಿತ್ರದುರ್ಗ ಕ್ಷೇತ್ರದಲ್ಲಿ ಶೇ.10 ರಷ್ಟು ಮತದಾನ

ದಾವಣೆಗೆರೆ ಕ್ಷೇತ್ರದಲ್ಲಿ ಶೇ.12 ರಷ್ಟು ಮತದಾನ

ಬಾಗಲಕೋಟೆಯಲ್ಲಿ ಶೇ 8ರಷ್ಟು ಮತದಾನ

ಚಿತ್ರದುರ್ಗ ಕ್ಷೇತ್ರದಲ್ಲಿ ಶೇ.10 ರಷ್ಟು ಮತದಾನ

ಬೆಳಗಾವಿಯಲ್ಲಿ ಶೇ.9ರಷ್ಟು ಮತದಾನ

ಚಾಮರಾಜನಗರದಲ್ಲಿ ಶೇ.10 ರಷ್ಟು ಮತದಾನ

ಸಂಕೇಶ್ವರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ

ಉತ್ತರಕನ್ನಡ ಕ್ಷೇತ್ರದಲ್ಲಿ ಶೇ.9 ರಷ್ಟು ಮತದಾನ

ಬಲ್ಳಾರಿ ಕ್ಷೇತ್ರದಲ್ಲಿ ಶೇ.9 ರಷ್ಟು ಮತದಾನ

ಕೋಲಾರ ಕ್ಷೇತ್ರದಲ್ಲಿ ಶೇ.15 ರಷ್ಟು ಮತದಾನ

ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಮತದಾನ

ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ ಗುಲ್ಬರ್ಗಾದ ಬಸವನಗರದಲ್ಲಿ ಮತದಾನ

ಕೋಲಾರ ಜಿಲ್ಲೆಯ ಮಾಸ್ತಿ ತಾಲೂಕಿನ ಗ್ರಾಮದಲ್ಲಿ ಮತದಾನ ಬಹಿಷ್ಕಾರ

ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಮತದಾನ

ಹಾನಗಲ್‌ನಲ್ಲಿ ಸಿಎಂ ಉದಾಸಿ ಮತದಾನ

ಕೆಲ ಮತಗಟ್ಟೆಗಳಲ್ಲಿ ಮತಯಂತ್ರ ದೋಷದಂದ ಮತದಾನ ಸ್ಥಗಿತ

ತೀರ್ಥಹಳ್ಳಿಯ ಕೋರನಕೋಟೆಯಲ್ಲಿ ಮತದಾನ ಬಹಿಷ್ಕಾರ

ದೊಡ್ಡಬಳ್ಳಾಪುರದಲ್ಲಿ ಮತದಾರರಿಂದ ನೀರಸ ಪ್ರತಿಕ್ರಿಯೆ

ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ.12.5 ರಷ್ಟು ಮತದಾನ

ಚಿಕ್ಕಮಗಳೂರು, ಬಳ್ಳಾರಿ, ಗದಗ್ ಕ್ಷೇತ್ರಗಳಲ್ಲಿ ಶೇ.10 ರಷ್ಟು ಮತದಾನ

ಕೊಪ್ಪಳದ ಗಣೇಸ್ ನಗರದಲ್ಲಿ ಮತದಾನ ಬಹಿಷ್ಕಾರ

ಗೃಹ ಸಚಿವ ಕೆ.ಜೆ.ಜಾರ್ಜ್ ಮತದಾನ

ರಾಜ್ಯದಲ್ಲಿ ಸರಾಸರಿ ಶೇ.12 ರಷ್ಟು ಮತದಾನ

ಮೈಸೂರು -ಕೊಡಗು ಶೇ.11 ರಷ್ಟು ಮತದಾನ

ಹಾಸನ ಕ್ಷೇತ್ರದಲ್ಲಿ ಷೇ.12 ರಷ್ಟು ಮತದಾನ

ಚಿಕ್ಕಮಗಳೂರು ಶೇ.10 ರಷ್ಟು ಮತಚಲಾವಣೆ

ಬೀದರ್‌ನಲ್ಲಿ ಶೇ.12 ರಷ್ಟು ಮತದಾನ

ಬೆಳಗಾವಿ ಶೇ.12 ರಷ್ಟು ಮತದಾನ,

ಧಾರವಾಡ ಶೇ.13.5 ರಷ್ಟು ಮತಚಲಾವಣೆ

ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಮತ ಚಲಾವಣೆ

12 ರಾಜ್ಯ 121 ಕ್ಷೇತ್ರಗಳಲ್ಲಿ ಇಂದು ಮತದಾನ

ಮೈಸೂರು ಶೇ.9.8ರಷ್ಟು ಮತದಾನ

ಮಂಗಳೂರು ಶೇ.12.3 ರಷ್ಟು ಮತಚಲಾವಣೆ

ದಕ್ಷಿಣ ಕನ್ನಡದಲ್ಲಿ ಶೇ.13 ರಷ್ಟು ಮತದಾನ

ರಾಯಚೂರು ಕ್ಷೇತ್ರದಲ್ಲಿ ಶೇ.9 ರಷ್ಟು ಮತದಾನ

ರಾಜ್ಯಾದ್ಯಂತ ಬೆಳಿಗ್ಗೆ 9 ಗಂಟೆಯವರೆಗೆ ಸರಾಸರಿ ಶೇ.9 ರಷ್ಟು ಮತದಾನ

ರಾಯಚೂರಿನ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ್ ಮತದಾನ

ಕಾಂಗ್ರೆಸ್ ಅಭ್ಯರ್ಥಿ ಜನಾರ್ದನ ಪೂಜಾರಿ ಮತದಾನ

ಮಾಸ್ತಿಯಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಹಣ ಹಂಚಿಕೆ ಪೊಲೀಸರಿಂದ ಲಘು ಲಾಠಿ ಪ್ರಹಾರ

ಬಳ್ಳಾರಿಯ ದೇವಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮತ್ತು ಮಾಜಿ ಸಂಸದೆ ಜೆ.ಶಾಂತಾ ಮತದಾನ

ಮದುವೆ ದಿನವಾದರೂ ಮತಚಲಾಯಿಸಿದ ವಧು

ಬಳ್ಳಾರಿ ನಗರದ ದೇವಿನಗರದಲ್ಲಿ ಕ್ಯಾಮರಾ ಕಸಿದು ಹಲ್ಲೆಗೆ ಯತ್ನಿಸಿದ ಪೊಲೀಸ್ ಇನ್ಸೆಪೆಕ್ಟರ್

ಬೆಂಗಳೂರಿನಲ್ಲಿ ನಟಿ ಭಾರತಿ ವಿಷ್ಣುವರ್ಧನ್ ಮತದಾನ

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್‌.ಎಸ್.ಮಲ್ಲಿಕಾರ್ಜುನ್ ಮತಚಲಾವಣೆ

ತುರುವೇಕೆರೆ ತಾಲೂಕಿನ ಮೂರು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ

ಬೆಂಗಳೂರಿನಲ್ಲಿ ಮಾಸ್ಟರ್ ಹಿರಣ್ಣಯ್ಯ ಮತದಾನ

ಶಿವಮೊಗ್ಗದಲ್ಲಿ ಇಲ್ಲಿಯವರೆಗೆ ಶೇ.10 ರಷ್ಟು ಮತದಾನ

ಹಾಸನ, ಕೊಪ್ಪಳ ಕ್ಷೇತ್ರಗಳಲ್ಲಿ ಶೇ.10 ರಷ್ಟು ಮತದಾನ

ಬೆಂಗಳೂರು ಗ್ರಾಮಾಂತರದಲ್ಲಿ ಶೇ.09 ರಷ್ಟು ಮತದಾನ

ಬಾಗಲಕೋಟೆಯಲ್ಲಿ ಶೇ.18 ರಷ್ಟು ಮತದಾನ

ಬೀದರ್‌ನಲ್ಲಿ ಶೇ.11 ರಷ್ಟು ಮತದಾನ

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯಿಂದ ಮತದಾನ

ಹುಬ್ಭಳ್ಳಿಯಲ್ಲಿ ಮಾಜಿ ಸಿಎಂ ಶೆಟ್ಟರ್ ಮತದಾನ

ದೊಡ್ಡಬಳ್ಳಾಪುರದ ಗೊಳ್ಳವಳ್ಳಿಯಲ್ಲಿ ಹಣ ಹಂಚುವ ವಿಚಾರದಲ್ಲಿ ಬಿಜೆಪಿ,ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಂದ ಗಲಾಟೆ


ಬೆಂಗಳೂರಿನಲ್ಲಿ ನಟ ದುನಿಯಾ ವಿಜಿಯಿಂದ ಮತ ಚಲಾವಣೆ

ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ್ ಮತದಾನ

ಬೆಂಗಳೂರಿನಲ್ಲಿ ಡಿಜಿಪಿ ಪಚಾವೋ ಮತದಾನ

ಮೂಢನಂಬಿಕೆಯಿಂದ ಪೂರ್ವದಿಕ್ಕಿಗೆ ಮತಯಂತ್ರ ತಿರುಗಿಸಿದ ಕೇಂದ್ರ ಸಚಿವ ಮುನಿಯಪ್ಪ

ಬಳ್ಳಾರಿಯ ಹೂವಿನ ಹಡಗಲಿಯ ಹಕ್ಕಂಡಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಸ್ಥಗಿತ

ಅಳಂದ ತಾಲೂಕಿನ ಮತಗಟ್ಟೆಯಲ್ಲಿ ಶೇ.10 ರಷ್ಟು ಮತದಾನ

ದೊರೈ ಕಾವಲ್‌ನಲ್ಲಿ ಮತದಾನ ಮಾಡಲು ಅಭ್ಯರ್ಥಿಗಳಿಗೆ ಹಣ ಕೇಳಿದ ಮತದಾರರು

ರಾಜ್ಯದಾದ್ಯಂತ ಶಾಂತಿಯುತ ಮತದಾನ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೂಡಾ ಶಾಂತಿಯುತ ಮತದಾನ

ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮತ ಚಲಾವಣೆ

ಕಾಮನಗರ ತಾಲೂಕಿನ ಬಿಡದಿಯಲ್ಲಿ ಸಚಿವ ಟಿ.ಕೆ.ಶಿವಕುಮಾರ್ ಬೆಂಬಲಿಗರಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ

ಡಿಕೆಶಿ ಬೆಂಬಲಿಗರ ದೌರ್ಜನ್ಯಕ್ಕೆ ಆಪ್ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಆಕ್ರೋಶ. ಆಪ್ ಕಾರ್ಯಕರ್ತರಾದ ಮೋಟೆಗೌಡ, ಚಂದನ್‌ಗೆ ಗಾಯ

ಚುನಾವಣೆ ಆಯೋಗದ ಸಿಬ್ಬಂದಿಗಳು ನಾಲಾಯಕ್ ಎಂದ ಆಪ್ ಅಭ್ಯರ್ಥಿ ರವಿಕೃಷ್ಣಾರೆಡ್ಡಿ

ತೀರ್ಥಹಳ್ಳಿಯಲ್ಲಿ ಸಚಿವ ತಿಮ್ಮನೆ ರತ್ನಾಕರ ಮತದಾನ

ಬೆಳ್ಳಿ ನಾಣ್ಯ ವಿತರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಮಧ್ಯ ಘರ್ಷಣೆ

ಹೊನ್ನಾಳಿಯ ಗೋಪುಗೊಂಡನಹಳ್ಳಿಯಲ್ಲಿ ಮಂಗಗಳಿಂದ ಮತದಾನಕ್ಕೆ ಅಡ್ಡಿ

ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಮತದಾನ

ರಾಜ್ಯಾದ್ಯಂತ ಬೆಳಿಗ್ಗೆ 11 ಗಂಟೆಯವರೆಗೆ ಶೇ. 21 ರಷ್ಟು ಮತದಾನ

ಗುಲ್ಬರ್ಗಾ ತಲೂಕಿನ ಹಾಗರಗಾ ಗ್ರಾಮದ ಮತದಾರರಿಂದ ಚುನಾವಣೆ ಬಹಿಷ್ಕಾರ


ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ಪದ್ಮಾವತಿ ಟೆಕ್ಸ್‌ಟೈಲ್ ಮಳಿಗೆಯ ಮೇಲೆ ಚುನಾವಣಾಧಿಕಾರಿಗಳ ರೈಡ್, ಸಾವಿರಾರು ಸೀರೆಗಳ ವಶ.ಸೀರೆಗಳ ಮೇಲೆ ನರೇಂದ್ರ ಮೋದಿ ಭಾವಚಿತ್ರ.

ಕೋಲಾರದ ಬಿಜೆಪಿ ಅಭ್ಯರ್ಥಿ ನಾರಾಯಣ್ ಸ್ವಾಮಿ ಮತಗಟ್ಟೆಗೆ ಪೂಜೆ ಸಲ್ಲಿಸಿ ನಂತ್ರ ಮತದಾನ

ಕರ್ತವ್ಯ ಲೋಪ ಎಸಿಪಿ ಸಿದ್ದಪ್ಪ ವಿರುದ್ಧ ಚುನಾವಣೆ ಆಯೋಗ ಕಟ್ಟು ನಿಟ್ಟಿನ ಕ್ರಮ

ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮತದಾನ

ಬೆಂಗಳೂರು ಗ್ರಾಮಾಂತರ ಜೆಡಿಎಸ್ ಅಭ್ಯರ್ಥಿ ಪ್ರಭಾಕರ್ ರೆಡ್ಡಿ ಮತದಾನ

ಶಿವಮೊಗ್ಗದ ಸೊರಬ ತಾಲೂಕಿನಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ

ಬಾಗಲಕೋಟೆಯ ಕೊತ್ಲೇಶ್ವರ್ ದೇವಾಲಯ ಬಳಿಯಿರುವ ಮತಗಟ್ಟೆಯಲ್ಲಿ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರಿಂದ ಮತದಾನಕ್ಕೆ ಅಡ್ಡಿ. ಪೊಲೀಸರಿಂದ ಲಾಠಿಪ್ರಹಾರ.

ಗದಗದ ನರಗುಂದದಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತನ್ನು ಚದುರಿಸಲು ಲಾಠಿ ಚಾರ್ಜ್

ಸವದತ್ತಿ ಶಾಸಕ ಆನಂದ್ ಮಹಾಮನಿ ಮತ್ತು ಪೊಲೀಸರ ನಡುವೆ ಜಗಳ.

ಬಸವೇಶ್ವರ ನಗರದಲ್ಲಿ ನಟಿ ಶೃತಿ ಮತದಾನ. ಕಾರ್ಯಕರ್ತರನ್ನು ಚದುರಿಸಲು ಪೊಲೀಸರ ಹರಸಾಹಸ

ಬೀದರ್‌ನಲ್ಲಿ ಧರ್ಮಸಿಂಗ್ ಮತದಾನ

ಮಡಿವಾಳದ ಮಾರುತಿನಗರದಲ್ಲಿ ಮೋದಿ ಭಾವಚಿತ್ರವಿರುವ ಸೀರೆಗಳ ಹಂಚಿಕೆ, ಚುನಾವಣಾಧಿಕಾರಿಗಳಿಂದ ಸೀರೆಗಳ ವಶ.

ಬೆಂಗಳೂರಿನ ಹನಮಂತನಗರದಲ್ಲಿ ಮತದಾನಕ್ಕೆ ಬಹಿಷ್ಕಾರ

ಬಳ್ಳಾರಿಯಲ್ಲಿ ಪೊಲೀಸರಿಂದ ಮಾಧ್ಯಮದವರ ಮೇಲೆ ಹಲ್ಲೆಗೆ ಯತ್ನ

ಮೈಸೂರಿನಲ್ಲಿ ರಾಣಿ ಪ್ರಮೋದಾದೇವಿ ಮತದಾನ

ಶಿವಾಜಿನಗರದಲ್ಲಿ ಸಚಿವ ರೋಷನ್‌ಬೇಗ್ ಮತಚಲಾವಣೆ

ರಾಮನಗರದ ಕೇತಗಾರನಹಳ್ಳಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮತಚಲಾವಣೆ

ಮತಯಂತ್ರದ ಮೇಲೆ ವಾಂತಿ ಮಾಡಿದ ಮತದಾರ

ಚೆನ್ನಗಿರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಮಹಿಮಾ ಪಟೇಲ್ ಮತಚಲಾವಣೆ

ಮಲ್ಲೇಶ್ವರಂನಲ್ಲಿ ನಟ ಜಗ್ಗೇಶ್ ಮತದಾನ

ಮತದಾನ ಮಾಡಿ ಪ್ರಾಣ ಬಿಟ್ಟ 70 ವರ್ಷ ವಯಸ್ಸಿನ ಅಜ್ಜಿ

ಪಶ್ಚಿಮ ಬಂಗಾಳದಲ್ಲಿ ಇಲ್ಲಿಯವರೆಗೆ ಶೇ.29 ರಷ್ಟು ಮತದಾನ

ಸವದತ್ತಿ ಶಾಸಕ ಆನಂದ್ ಮಾಮನಿ ಮತ್ತು ಪೊಲೀಸರ ನಡುವೆ ಘರ್ಷಣೆ

ನೆಲಮಂಗಲದ ಭೈರನಾಯಕನಹಳ್ಳಿಯಲ್ಲಿ ಪತ್ನಿಯಿಂದಲೇ ಮತದಾನ ಮಾಡಿಸಿದ ಮಾಜಿ ಸಚಿವ ಚೆನ್ನಿಗಪ್ಪ

ಬೀದರ್ ಜಿಲ್ಲೆಯ ಅಲ್ಲಾಪುರ್, ನೇಮಿತಾಬಾದ್ ಖಾಶೆಂಪುರ್ ಜೈನಾಪುರ್ ಗ್ರಾಮಗಳ ಮತದಾರರಿಂದ ಚುನಾವಣೆ ಬಹಿಷ್ಕಾರ

ಹಾಸನದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ಮತಚಲಾವಣೆ

ಪಾರ್ವತಮ್ಮ ರಾಜ್‌ಕುಮಾರ್ ಸದಾಶಿವನಗರದ ಮತಗಟ್ಟೆಯಲ್ಲಿ ಮತದಾನ

ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆಯಲ್ಲಿ ನಚಿವ ಅಂಬರೀಶ್ ಮತದಾನ

ಸದಾಶಿವನಗರದ ಪೂರ್ಣ ಪ್ರಜ್ಞಾ ಶಾಲೆಯಲ್ಲಿ ನಟ ಪುನೀತ್ ಮತಚಲಾವಣೆ

ಹುಮ್ನಾಬಾದ್ ಮತಗಟ್ಟೆಯಲ್ಲಿ ಮತದಾನ ಯಂತ್ರದ ಮೇಲೆ ಫ್ಯಾನ್ ಬಿದ್ದು ಮತ ಯಂತ್ರ ಸ್ಥಗಿತ

ಬೆಂಗಳೂರಿನಲ್ಲಿ ಹಿರಿಯ ನಟ ಅನಂತನಾಗ್ ಮತದಾನ

ಬೀದರ್‌ನಲ್ಲಿ ಶೇ.32 ರಷ್ಟು ಮತದಾನ

ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಒತ್ತಡ ಹೇರಿದ ಕಾರ್ಯಕರ್ತರ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ

ಕೇಂದ್ರ ಸಚಿವ ಮುನಿಯಪ್ಪಗೆ ಸಹಕಾರ ನೀಡಿದ ಚುನಾವಣಾಧಿಕಾರಿ ಮಂಜುಳಾ ಎತ್ತಂಗಡಿ

ಸಿದ್ರಾಮಯ್ಯನ ಹುಂಡಿ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತಚಲಾವಣೆ

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಬಿಎಸ್‌ಪಿ ಕಾರ್ಯಕರ್ತನ ಮೇಲೆ ಡಿಕೆಶಿ ಬೆಂಬಲಿಗರ ಹಲ್ಲೆ

ಯಾದಗಿರಿ ಕಾಲೂಕಿನ ಕೊಂಕಳ್ ಗ್ರಾಮದ ಮತಗಟ್ಟೆಗೆ ಬೈಕ್ ತಂದಿದ್ದಕ್ಕಾಗಿ ಮತದಾರನ ಮೇಲೆ ಹಲ್ಲೆ

ಕಬಟೂರಿನಲ್ಲಿ ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಪತ್ನಿ ಸಮೇತ ಮತದಾನ

ವೆಬ್ದುನಿಯಾವನ್ನು ಓದಿ