ಬೆಂಗಳೂರು ದಕ್ಷಿಣದಲ್ಲಿ ಖ್ಯಾತನಾಮರ ಹಣಾಹಣಿ

ಗುರುವಾರ, 17 ಏಪ್ರಿಲ್ 2014 (09:00 IST)
PR
ಬೆಂಗಳೂರು ದಕ್ಷಿಣ ಮತ ಕ್ಷೇತ್ರದಲ್ಲಿ ಘಟಾನುಘಟಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಖ್ಯಾತ ಉದ್ಯಮಿ ಮತ್ತು ಆಧಾರನ ಮಾಜಿ ಮುಖ್ಯಸ್ಥ ನಂದನ ನೀಲಕೇಣಿ ಮತ್ತು ಬಿಜೆಪಿ ಪಕ್ಷದ ದಿಗ್ಗಜ ಅನಂತ ಕುಮಾರ ಕಣದಲ್ಲಿ ಇದ್ದಾರೆ.

ಇನ್ಪೋಸಿಸ್‌‌‌ನಲ್ಲಿ ಮುಖ್ಯಸ್ಥಾನದಲ್ಲಿದ್ದ ನಂದನ್ ಈಗ ಕಾಂಗ್ರೆಸ್‌ ಪಕ್ಷದ ಮೂಲಕ ರಾಜಕಾರಣಕ್ಕೆ ಬಂದಿದ್ದಾರೆ. ಇವರ ಎದುರು ಬಿಜೆಪಿಯ ಮುಖ್ಯ ನಾಯಕ ಅನಂತ ಕುಮಾರ ಕಣಕ್ಕೆ ಇಳಿದಿದ್ದಾರೆ.

1996 ರಿಂದ ಅನಂತ ಕುಮಾರ ಈ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿದ್ದಾರೆ. ಐಟಿ ಕ್ಷೇತ್ರದ ದಿಗ್ಗಜ್ ನಿಲಕೇಣಿಯವರು ಅನಂತ ಕುಮಾರ ವಿರುದ್ದ ಭಾರಿ ಪೈಪೋಟಿಯಲ್ಲಿದ್ದಾರೆ.

ಇವರ ಜೊತೆಗೆ ಆಪ್‌ ಪಕ್ಷದಿಂದ ನೀನಾ ಪಿ ನಾಯಕ್ ಜೊತೆಗೆ ಬಸಪ್ಪಾ , ಎಐಎಫ್‌‌ಬಿ , ಜೆಡಿಯು , ಜೆಡಿಎಸ್‌ ಪಕ್ಷದಿಂದ ಕೂಡ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಮಧ್ಯೆ ಬಿಜೆಪಿಯ ಅನಂತಕುಮಾರ ವಿರುದ್ದ ಸಿಡಿದೆದ್ದು , ಅನಂತ ಕುಮಾರರ ವಿರುದ್ದ ಶ್ರೀರಾಮ ಸೇನೆಯ ಮಖ್ಯಸ್ಥ ಪ್ರಮೋದ ಮುತಾಲಿಕ್ ಕಣಕ್ಕೆ ಇಳಿದಿದ್ದಾರೆ. ಆದರೆ ಈ ಸಂದರ್ಭದಲ್ಲಿ ನೀಲಕೇಣಿ ಮತ್ತು ಅನಂತ ಕುಮಾರ ನಡುವೆ ಮಾತ್ರ ಭಾರಿ ಪೈಪೋಟಿಯಿದೆ.

ವೆಬ್ದುನಿಯಾವನ್ನು ಓದಿ