ಬೆಳಿಗ್ಗೆ 9 ಗಂಟೆವರೆಗೆ ವಿವಿಧ ಕ್ಷೇತ್ರಗಳ ಮತದಾನದ ಶೇಕಡಾವಾರು ಪ್ರಮಾಣ

ಗುರುವಾರ, 17 ಏಪ್ರಿಲ್ 2014 (09:35 IST)
PR
PR
ಬೆಂಗಳೂರು: ರಾಜ್ಯದ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಮತದಾರರು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತಚಲಾಯಿಸಿದರು. ಬೆಳಿಗ್ಗೆ ಮತದಾನ ನೀರಸವಾಗಿ ಆರಂಭವಾದರೂ ನಂತರ ಬಿರುಸಿನ ಮತದಾನ ನಡೆಯುತ್ತಿದೆ. ಈ ಬಾರಿ ಗುರುತಿನ ಚೀಟಿ ಇಲ್ಲದವರೂ ಪಾಸ್‌ಪೋರ್ಟ್, ಆಧಾರ ಕಾರ್ಡ್ ಮುಂತಾದ ಗುರುತಿನ ಚೀಟಿ ತೋರಿಸುವ ಮೂಲಕ ಮತದಾನಕ್ಕೆ ಅವಕಾಶ ನೀಡಿರುವುದರಿಂದ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗುವುದೆಂದು ನಿರೀಕ್ಷಿಸಲಾಗಿದೆ. ಬೆಳಿಗ್ಗೆ 9 ಗಂಟೆವರೆಗೆ ವಿವಿಧ ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದ ಶೇಕಡಾವಾರು ಪ್ರಮಾಣ ಕೆಳಗಿನಂತಿದೆ.

ಚಾಮರಾಜನಗರ ಕ್ಷೇತ್ರದಲ್ಲಿ ಶೇ. 12ರಷ್ಟು ಮತದಾನ, ದಾವಣಗೆರೆ ಕ್ಷೇತ್ರದಲ್ಲಿ ಶೇ. 12ರಷ್ಟು ಮತದಾನ, ಚಿತ್ರದುರ್ಗ ಕ್ಷೇತ್ರದಲ್ಲಿ ಶೇ. 10ರಷ್ಟು ಮತದಾನ, ಬೆಳಗಾವಿ ಕ್ಷೇತ್ರದಲ್ಲಿ ಶೇ. 9, ಮೈಸೂರು-ಕೊಡಗು ಶೇ.12, ಚಿಕ್ಕೋಡಿ ಕ್ಷೇತ್ರದಲ್ಲಿ ಶೇ. 8, ಗುಲ್ಬರ್ಗಾ ಕ್ಷೇತ್ರದಲ್ಲಿ ಶೇ. 6ರಷ್ಟು ಮತದಾನ, ಬಿಜಾಪುರ ಕ್ಷೇತ್ರದಲ್ಲಿ ಶೇ. 3ರಷ್ಟು ಮತದಾನ, ಬಾಗಲಕೋಟೆ ಕ್ಷೇತ್ರದಲ್ಲಿ ಶೇ. 9ರಷ್ಟು ಮತದಾನ, ಗುಲ್ಬರ್ಗ ಕ್ಷೇತ್ರದಲ್ಲಿ ಶೇ. 6ರಷ್ಟು ಮತದಾನ, ಮಂಡ್ಯದಲ್ಲಿ ಶೇ. 7ರಷ್ಟು ಮತದಾನ, ಬಳ್ಳಾರಿ ಕ್ಷೇತ್ರದಲ್ಲಿ ಶೇ. 9ರಷ್ಟು ಮತದಾನ, ಕೋಲಾರದಲ್ಲಿ ಶೇ. 15ರಷ್ಟು ಮತದಾನವಾಗಿದೆ.

ವೆಬ್ದುನಿಯಾವನ್ನು ಓದಿ