ಮತದಾನದಲ್ಲಿ ಮೂಢನಂಬಿಕೆಗಳಿಗೆ ಮೊರೆಹೋದ ಜನಪ್ರತಿನಿಧಿಗಳು

ಗುರುವಾರ, 17 ಏಪ್ರಿಲ್ 2014 (13:01 IST)
PR
PR
ಬೆಂಗಳೂರು: ಮತದಾನದ ಕಾಲದಲ್ಲಿ ನಮ್ಮ ಜನಪ್ರತಿನಿಧಿಗಳು ಎನಿಸಿಕೊಂಡವರು ಅನೇಕ ಮೂಢನಂಬಿಕೆಗಳಿಗೆ ಶರಣಾದ ಘಟನೆ ನಡೆದಿದೆ.ಕೇಂದ್ರಸಚಿವ ಮುನಿಯಪ್ಪ ಕೂಡ ಇಂತಹ ಮೂಢನಂಬಿಕೆಗೆ ಮೊರೆಹೋದ ಸುದ್ದಿ ಬಂದಿತ್ತು. ಮುನಿಯಪ್ಪ ಮತಯಂತ್ರದ ದಿಕ್ಕನ್ನು ಬದಲಾಯಿಸಿ ಮತ ಚಲಾಯಿಸಿದ್ದರು. ಮುನಿಯಪ್ಪನವರಿಗೆ ಮತಗಟ್ಟೆಯಲ್ಲಿ ವಾಸ್ತುದೋಷದ ಭೀತಿ ಆವರಿಸಿದ್ದರಿಂದ ಈ ರೀತಿಯಲ್ಲಿ ಮತಚಲಾಯಿಸಿದ್ದರು. ಈಗ ಜನಪ್ರತಿನಿಧಿಗಳು ಎನಿಸಿಕೊಂಡ ಮಾಜಿ ಸಚಿವ ಚೆನ್ನಿಗಪ್ಪ ಕೂಡ ಮೂಢನಂಬಿಕೆಗೆ ಶರಣಾಗಿ ತಮ್ಮ ಮತವನ್ನು ತಮ್ಮ ಪತ್ನಿ ಕೈಯಿಂದ ಹಾಕಿಸಿದ ಘಟನೆ ನಡೆದಿದೆ.

ನೆಲಮಂಗಲದ ಬೈರನಾಯಕನಹಳ್ಳಿ ಮತಗಟ್ಟೆಯಲ್ಲಿ ಚೆನ್ನಿಗಪ್ಪ ಬದಲಿಗೆ ಪತ್ನಿ ಸಿದ್ದಗಂಗಮ್ಮ ಮತದಾನ ಮಾಡಿದರು. ಚೆನ್ನಿಗಪ್ಪ ಅವರಿಗೆ ತಮ್ಮ ಪತ್ನಿ ಮನೆಗೆ ಮಹಾಲಕ್ಷ್ಮಿ ಎಂಬ ನಂಬಿಕೆ ಇರುವುದರಿಂದ ಪತ್ನಿಯ ಕೈಯಲ್ಲೇ ಮತದಾನ ಮಾಡಿಸಿದ್ದಾರೆಂದು ತಿಳಿದುಬಂದಿದೆ. ಜೆಡಿಎಸ್ ಮುಖಂಡ ದೇವೇಗೌಡರು ಐದು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ನಂತರ ಮತದಾನ ಮಾಡಿದ ಘಟನೆ ನಡೆದಿದೆ. ಆದರೆ ಇದು ದೇವರ ಮೇಲಿನ ನಂಬಿಕೆಯೇ ಹೊರತು ಮೂಢನಂಬಿಕೆ ವ್ಯಾಪ್ತಿಯಲ್ಲಿ ಬರುವುದಿಲ್ಲ.

ವೆಬ್ದುನಿಯಾವನ್ನು ಓದಿ