ಕರ್ನಾಟಕದಲ್ಲಿ ಶೇ. 65 ಮತದಾನ: ದ.ಕ.ದಲ್ಲಿ ಅತ್ಯಧಿಕ

ಶುಕ್ರವಾರ, 18 ಏಪ್ರಿಲ್ 2014 (15:09 IST)
PR
PR
ಬೆಂಗಳೂರು: 16ನೇ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಗುರುವಾರ 4.62 ಕೋಟಿ ಮತದಾರರ ಪೈಕಿ ಅಂದಾಜು ಶೇ. 65ರಷ್ಟು ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಈ ಚುನಾವಣೆಯಿಂದ 28 ಕ್ಷೇತ್ರಗಳ 434 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ. ಕೆಲವು ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ, ಚುನಾವಣೆ ಹೆಚ್ಚುಕಡಿಮೆ ಶಾಂತಿಯುತವಾಗಿತ್ತು. ಕಳೆದ ಬಾರಿ ಚುನಾವಣೆಯಲ್ಲಿ ಶೇಕಡವಾರು ಮತದಾನದ ಪ್ರಮಾಣ 58.81 ಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಮತದಾನವಾಗಿದೆ.

9 ಕ್ಷೇತ್ರಗಳಲ್ಲಿ ಶೇ. 70ಕ್ಕಿಂತ ಹೆಚ್ಚು ಮತದಾನ ದಾಖಲಾಗಿದೆ. 2004ನೇ ಲೋಕಸಭೆ ಚುನಾವಣೆಯಲ್ಲಿ ಶೇ. 65.14ರಷ್ಟು ಮತದಾನವಾಗಿತ್ತು ಮತ್ತು 2013ರ ವಿಧಾನಸಭೆ ಚುನಾವಣೆಯಲ್ಲಿ ಶೇ. 72ರಷ್ಟು ಮತದಾನವಾಗಿತ್ತು. ದಕ್ಷಿಣ ಕನ್ನಡದಲ್ಲಿ ಅತ್ಯಧಿಕ ಮತದಾನ(ಶೇ. 75) ದಾಖಲಾಗಿದ್ದು, ಗುಲ್ಬರ್ಗದಲ್ಲಿ ಶೇ.52 ಮತದಾನ ದಾಖಲಾಗಿದೆ. ಬೆಂಗಳೂರಿನ ಎಲ್ಲ ಮೂರು ಕ್ಷೇತ್ರಗಳಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ. ಬೆಂಗಳೂರು ಸೆಂಟ್ರಲ್ ಶೇ. 55, ಬೆಂ.ಉತ್ತರ ಶೇ. 52 ಮತ್ತು ಬೆಂ.ದಕ್ಷಿಣದಲ್ಲಿ ಶೇ.55 ಮತದಾನ ದಾಖಲಾಗಿದೆ.

ಇತರ ಕ್ಷೇತ್ರಗಳಲ್ಲಿ ಶೇಕಡವಾರು ಪ್ರಮಾಣ ಚಿಕ್ಕೋಡಿ- 71, ಬೆಳಗಾಂ-63.3, ಬಾಗಲಕೋಟೆ-63.2, ಬಿಜಾಪುರ-55, ರಾಯಚೂರು-54, ಬೀದರ್ -58, ಕೊಪ್ಪಳ-64, ಬಳ್ಳಾರಿ-71, ಹಾವೇರಿ-68, ಧಾರವಾಡ-66, ಉತ್ತರಕನ್ನಡ-65, ದಾವಣಗೆರೆ-69, ಶಿವಮೊಗ್ಗ-70, ಉಡುಪಿ-ಚಿಕ್ಕಮಗಳೂರು-72, ಹಾಸನ-72, ಚಿತ್ರದುರ್ಗ-53, ತುಮಕೂರು-71, ಮಂಡ್ಯ-69, ಮೈಸೂರು-ಕೊಡಗು-66, ಚಾಮರಾಜನಗರ-71, ಬೆಂಗಳೂರು ಗ್ರಾಮಾಂತರ-68, ಚಿಕ್ಕಬಳ್ಳಾಪುರ-73 ಮತ್ತು ಕೋಲಾರ-69.

ವೆಬ್ದುನಿಯಾವನ್ನು ಓದಿ