ಕ್ಷೇತ್ರಗಳಲ್ಲಿ ಜಾಗೃತಿ: ಶೇ. 10ರಷ್ಟು ಮತದಾನದ ಪ್ರಮಾಣ ಹೆಚ್ಚಳ

ಶುಕ್ರವಾರ, 18 ಏಪ್ರಿಲ್ 2014 (18:31 IST)
PR
PR
ಬೆಂಗಳೂರು: ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ 2009ರ ಲೋಕಸಭೆ ಚುನಾವಣೆಗಿಂತ ಶೇ. 10ರಷ್ಟು ಮತದಾನದ ಪ್ರಮಾಣ ಹೆಚ್ಚಾಗಿದೆ. ಹಿಂದಿನ ಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಸರಾಸರಿ ಮತದಾನ ಶೇ. 44.7ರಷ್ಟಾಗಿದ್ದರೆ ಈ ಬಾರಿ ಶೇ. 54ರಷ್ಟಾಗಿದೆ. ಸರ್ಕಾರಿ ಸಂಸ್ಥೆಗಳಲ್ಲದೇ ನಾಗರಿಕ ಸಂಸ್ಥೆಗಳು ಮತದಾನದ ಜಾಗೃತಿ ಮೂಡಿಸಿದ ಮೇಲೆ ಮತದಾನದ ಪ್ರಮಾಣ ಹೆಚ್ಚಾಗಿದೆಯೆಂದು ಹೇಳಲಾಗುತ್ತಿದೆ. ಅನೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ 6.30ಕ್ಕೆ ಮತದಾರರು ಸೇರಿದ್ದರೂ ಮತದಾನಕ್ಕೆ ಅವರು ಅರ್ಧ ಗಂಟೆ ಕಾಯಬೇಕಾಯಿತು.

ಬೆಂಗಳೂರು ಉತ್ತರದಲ್ಲಿ ಬಿಜೆಪಿ ಅಭ್ಯರ್ಥಿ ಸದಾನಂದ ಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ. ನಾರಾಯಣ ಸ್ವಾಮಿ ನಡುವೆ ಹಣಾಹಣಿ ಹೋರಾಟ ನಡೆಸಿದ್ದು, ಶೇ. 52 ಮತದಾನವಾಗಿದೆ.ಬೆಂಗಳೂರು ದಕ್ಷಿಣದಲ್ಲಿ ಶೇ. 55 ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ ಶೇ. 55ರಷ್ಟು ಮತದಾನವಾಗಿದೆ. ಏತನ್ಮಧ್ಯೆ, ಮೂರು ಕ್ಷೇತ್ರಗಳಲ್ಲಿ ಮತದಾರರ ಹೆಸರು ಕಾಣೆಯಾಗಿರುವುದು ದುಃಸ್ವಪ್ವವಾಗಿ ಕಾಡಿತು. ಬೆಂಗಳೂರು ದಕ್ಷಿಣ ಕ್ಷೇತ್ರದ ಯಾರಬ್‌ನಗರ ಮತ್ತು ಮೊಹ್ಮಡನ್ ಬ್ಲಾಕ್‌ನಲ್ಲಿ ಮತದಾರರ ಪಟ್ಟಿಯಿಂದ ಅನೇಕ ಮಂದಿಯ ಹೆಸರು ಕಾಣೆಯಾಗಿತ್ತು.

ವೆಬ್ದುನಿಯಾವನ್ನು ಓದಿ