ಡಿಎಂಕೆ, ಎಐಡಿಎಂಕೆಗೆ ಬದ್ಧತೆಯಿಲ್ಲ: ಕೃಷ್ಣಗಿರಿಯಲ್ಲಿ ಸಿದ್ದರಾಮಯ್ಯ ಪ್ರಚಾರ

ಶನಿವಾರ, 19 ಏಪ್ರಿಲ್ 2014 (16:32 IST)
PR
PR
ಕೃಷ್ಣಗಿರಿ: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮತದಾನ ಮುಗಿದ ಬಳಿಕ ಈಗ ತಮಿಳುನಾಡಿನ ಕೃಷ್ಣಗಿರಿಯಲ್ಲಿ ಕಾಂಗ್ರೆಸ್ ಪರ ಪ್ರಚಾರವನ್ನು ಸಿಎಂ ಸಿದ್ದರಾಮಯ್ಯ ಆರಂಭಿಸಿದರು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು ಎಂಬ ನಿರೀಕ್ಷೆಯಿಂದ ಇಲ್ಲಿಗೆ ಬಂದಿರುವುದಾಗಿ ಸಿದ್ದರಾಮಯ್ಯ ಹೇಳಿದರು. ಕೃಷ್ಣಗಿರಿ, ಸೇಲಂನಲ್ಲಿ ಶೇ. 60ರಷ್ಟು ಜನರಿಗೆ ಕನ್ನಡ ಗೊತ್ತಿದೆ.ಆದ್ದರಿಂದ ಕನ್ನಡದಲ್ಲಿ ಮಾತನಾಡಿದರೆ ಅವರಿಗೆ ಉತ್ತೇಜನ ಸಿಗುವುದರಿಂದ ಕನ್ನಡದಲ್ಲೇ ಭಾಷಣ ಮಾಡಿದ್ದಾಗಿ ಸಿಎಂ ತಿಳಿಸಿದರು. ಕಳೆದ ಬಾರಿ ಡಿಎಂಕೆ ಜತೆ ಮೈತ್ರಿಯಿತ್ತು.

ಮೈತ್ರಿ ಇಲ್ಲದಿದ್ದರೂ ಕೆಲವು ಸ್ಥಾನಗಳನ್ನು ನಾವು ಗೆದ್ದಿದ್ದೆವು.ಆದರೆ ಈಗ ಡಿಎಂಕೆ ಮತ್ತು ಎಐಡಿಎಂಕೆ ಯಾವ ಪಕ್ಷಕ್ಕೂ ಬದ್ಧತೆಯಿಲ್ಲ. ಒಂದು ಕಾಲದಲ್ಲಿ ಕೃಷ್ಣಗಿರಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಇಲ್ಲಿ ಕಾಂಗ್ರೆಸ್ ಅಭಿಮಾನಿಗಳು ಇರುವುದರಿಂದ ನಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದರು. ಕೃಷ್ಣಗಿರಿಯಲ್ಲಿ ರಾಗಿ ಮುದ್ದೆ ಹಾಗೂ ನಾಟಿ ಕೋಳಿ ಸಾರನ್ನು ಮಧ್ಯಾಹ್ನ ಸವಿದು ಸಿಎಂ ಸಂತಸಪಟ್ಟರು.

ವೆಬ್ದುನಿಯಾವನ್ನು ಓದಿ