ರೋಡ್ ಸೇಫ್ಟೀ ಟೂರ್ನಮೆಂಟ್: ಸಿನಿ ಪ್ರೇಕ್ಷಕರನ್ನು ಕ್ರಿಕೆಟ್ ಗೆ ಸೆಳೆಯಲು ಪ್ಲ್ಯಾನ್

ಶುಕ್ರವಾರ, 28 ಫೆಬ್ರವರಿ 2020 (10:20 IST)
ಮುಂಬೈ: ಮಾರ್ಚ್ 7 ರಿಂದ ಆರಂಭವಾಗಲಿರುವ ದಿಗ್ಗಜ ಕ್ರಿಕೆಟಿಗರ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ನ್ನು ಜನಪ್ರಿಯಗೊಳಿಸಲು ವಯೋಕಾಮ್ ನೆಟ್ ವರ್ಕ್ ಎಲ್ಲಾ ಪ್ರಯತ್ನ ನಡೆಸುತ್ತಿದೆ.


ವಯೋಕಾಮ್ ನೆಟ್ ವರ್ಕ್ ತನ್ನ ಕಲರ್ಸ್ ಸಿನಿಮಾ ವಾಹಿನಿಯಲ್ಲಿ ಮಾತ್ರವಲ್ಲದೆ, ದೂರದರ್ಶನದಲ್ಲೂ ಈ ಪಂದ್ಯಗಳ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಿದೆ. ಈ ಮೂಲಕ ಕ್ರಿಕೆಟ್ ಜತೆಗೆ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ತಂತ್ರ ರೂಪಿಸಿದೆ.

ಹಿಂದೆಯೂ ಹಲವು ಬಾರಿ ಅದರಲ್ಲೂ ಸೆಟ್ ಮ್ಯಾಕ್ಸ್ ವಾಹಿನಿ ಐಪಿಎಲ್ ನ್ನು ತನ್ನ ವಾಹಿನಿಯಲ್ಲಿ ನೇರಪ್ರಸಾರ ಮಾಡುವ ಮೂಲಕ ತನ್ನ ವಾಹಿನಿಯ ಸಿನಿಮಾ ಪ್ರೇಕ್ಷಕರನ್ನು ಕ್ರಿಕೆಟ್ ಗೆ ಸೆಳೆಯಲು ತಂತ್ರ ಹೆಣೆದಿತ್ತು. ಈಗ ವಯೋಕಾಮ್ ನೆಟ್ ವರ್ಕ್ ಕೂಡಾ ಅದನ್ನೇ ಮಾಡುತ್ತಿದ್ದು, ಆ ಮೂಲಕ ರಸ್ತೆ ಸುರಕ್ಷತೆಗಾಗಿ ಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಿಯನ್ನು ಜನಪ್ರಿಯಗೊಳಿಸಲು ಯೋಜನೆ ರೂಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ