ಮನೆಯಲ್ಲಿಯೇ ಚಾಕಲೇಟ್ ತಯಾರಿಸುವುದು ಹೇಗೆ ಗೊತ್ತಾ?

ಶುಕ್ರವಾರ, 22 ಮೇ 2020 (08:45 IST)
Normal 0 false false false EN-US X-NONE X-NONE

ಬೆಂಗಳೂರು : ಚಾಕಲೇಟ್ ಎಂದರೆ ಎಲ್ಲಾ ಮಕ್ಕಳಿಗೂ  ತುಂಬಾ ಇಷ್ಟಾನೆ. ಆದರೆ ಪದೇ ಪದೇ ಹೊರಗಡೆಯಿಂದ ಚಾಕಲೇಟ್ ತಂದು ಮಕ್ಕಳಿಗೆ ನೀಡಿ ಆರೋಗ್ಯ ಕೆಡಿಸಿಕೊಳ್ಳುವ ಬದಲು  ಮನೆಯಲ್ಲೇ ತಯಾರಿಸಿ ನೀಡಿದರೆ ತುಂಬಾ ಒಳ್ಳೆಯದು. ಈ ಚಾಕಲೇಟ್ ಮಾಡುವ ವಿಧಾನ ಇಲ್ಲಿದೆ ನೋಡಿ.
 

ಬೇಕಾಗುವ ಸಾಮಾಗ್ರಿಗಳು : ಅಮೂಲ್ ಹಾಲಿನ ಪುಡಿ 3 ಕಪ್, ಕೊಕೋ ಪುಡಿ1 ಕಪ್, ಸಕ್ಕರೆ 2 ಕಪ್, ಬೆಣ್ಣೆ ½ ಕಪ್.

ಮಾಡುವ ವಿಧಾನ : ಒಂದು ಪಾತ್ರೆಯಲ್ಲಿ ಹಾಲಿನ ಪುಡಿ ಹಾಗೂ ಚಾಕಲೇಟ್ ಪುಡಿಯನ್ನು ಬೆರೆಸಿ. ಬಳಿಕ ದಪ್ಪದ ಕಡಾಯಿಯನ್ನು ಒಲೆಯ ಮೇಲಿಟ್ಟು ಸ್ವಲ್ಪ ನೀರು ಹಾಕಿ ನೀರು ಬಿಸಿಯಾಗುವಾಗ ಸಕ್ಕರೆ ಹಾಕಿ ಚೆನ್ನಾಗಿ ಕಲಕಿ. ಪಾಕ ಸ್ವಲ್ಪ ಮಂದವಾಗುತ್ತಾ ಬಂದಾಗ ಬೆಣ್ಣೆ ಹಾಕಿ ನಂತರ ಚಾಕೋಲೆಟ್ ಪುಡಿ ಹಾಗೂ ಹಾಲಿನ ಪುಡಿಯ ಮಿಶ್ರಣವನ್ನು ಸೇರಿಸಿ ಕಲಸಿ ಗಟ್ಟಿಯಾಗುತ್ತಾ ಬಂದಾಗ ಕೆಳಗಿಳಿಸಿ. ಈ ಮಿಶ್ರಣವನ್ನು ತುಪ್ಪ ಸವರಿದ ಪಾತ್ರೆಯಲ್ಲಿ ಹಾಕಿ ತಣ್ಣಗಾಗಲು ಬಿಡಿ. ನಂತರ ಚಾಕುವಿನಿಂದ ಕತ್ತರಿಸಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ