ಬೇಸಿಗೆಯಲ್ಲಿ ಪುನರ್ಪುಳಿ ಜ್ಯೂಸ್ ಕುಡಿಯಿರಿ

Krishnaveni K

ಶನಿವಾರ, 20 ಏಪ್ರಿಲ್ 2024 (10:46 IST)
WD
ಬೆಂಗಳೂರು: ಬೇಸಿಗೆಯಲ್ಲಿ ದಾಹ ಹೆಚ್ಚಾಗುವುದರ ಜೊತೆಗೆ ದೇಹ ಉಷ್ಣತೆ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಂಡುಬರಬಹುದು. ಅದಕ್ಕಾಗಿ ಪುನರ್ಪುಳಿ ಜ್ಯೂಸ್ ಅತ್ಯುತ್ತಮ.
 

ಪುನರ್ಪುಳಿ ಅಥವಾ ಕೋಕಂ ಜ್ಯೂಸ್ ಎಂದು ಕರೆಯಿಸಿಕೊಳ್ಳುವ ಕೆಂಪು ಬಣ್ಣದ ಹಣ್ಣಿನ ಜ್ಯೂಸ್ ನಮ್ಮ ದೇಹಕ್ಕೆ ತಂಪು ನೀಡುವುದಲ್ಲದೆ, ಬೇಸಿಗೆಯ ದಾಹವನ್ನು ತೀರಿಸುವುದು. ಪುನರ್ಪುಳಿ ಒಂದು ಹುಳಿ ಮಿಶ್ರಿತ ಹಣ್ಣಾಗಿದ್ದು, ಅದರ ತೊಗಟೆಯನ್ನು ಒಣಗಿಸಿಟ್ಟು ಎಷ್ಟೋ ಸಮಯದವರೆಗೆ ಉಪಯೋಗಿಸಬಹುದಾಗಿದೆ.

ಪುನರ್ಪುಳಿಯಲ್ಲಿ ವಿಟಮಿನ್ ಸಿ, ಖನಿಜಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿದೆ. ಬೇಸಿಗೆಯಲ್ಲಿ ದೇಹ ತಂಪಗಾಗಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಅಂಶಗಳು ಇದರಲ್ಲಿವೆ. ಇದರಲ್ಲಿರುವ ಆಮ್ಲೀಯತೆ ಗುಣ ಶೀತ, ಕಫ, ತುಂಬಾ ಸಮಯದವರೆಗೆ ಗುಣವಾಗದ ಹುಣ್ಣು ಗುಣಪಡಿಸಲು ಸಹಕಾರಿಯಾಗಿದೆ.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಅಜೀರ್ಣ, ಅಸಿಡಿಟಿ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರಿಸುವುದು ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೂ ಒಂದು ಲೋಟ ಕೋಕಂ ಜ್ಯೂಸ್ ಕುಡಿದರೆ ಉತ್ತಮ. ಬೇಸಿಗೆಯಲ್ಲಿ ದೇಹ ನಿರ್ಜಲೀಕರಣವಾಗದಂತೆ ತಡೆಯುವ ಗುಣವೂ ಇದರಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ