ಹಲ್ಲಿನ ವಸಡಿನಲ್ಲಿ ರಕ್ತ ಬರಲು ಕಾರಣಗಳು

Krishnaveni K

ಮಂಗಳವಾರ, 26 ಮಾರ್ಚ್ 2024 (09:57 IST)
Photo Courtesy: Twitter
ಬೆಂಗಳೂರು: ಹಲ್ಲುಜ್ಜುವಾಗ ಕೆಲವೊಮ್ಮೆ ವಸಡಿನಿಂದ ರಕ್ತ ಬರಬಹುದು. ವಸಡಿನಿಂದ ರಕ್ತ ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ಇದಕ್ಕೆ ಅನೇಕ ಕಾರಣಗಳಿರಬಹುದು.

ವಸಡಿನಿಂದ ರಕ್ತ ಬರುವುದು ಅನೇಕ ರೋಗಗಳ ಲಕ್ಷಣವಾಗಿರುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡಿಸಿಕೊಂಡು ಗುಣಪಡಿಸುವುದು ಅಗತ್ಯ. ಪೋಷಕಾಂಶದ ಕೊರತೆಯಿಂದಲೂ ವಸಡಿನಿಂದ ರಕ್ತ ಬರುವ ಸಮಸ್ಯೆ ಕಂಡುಬರಬಹುದು. ಇತರೆ ಕಾರಣಗಳು ಏನೇನಿದೆ ನೋಡೋಣ.

ಬಾಯಿಯ ಶುಚಿತ್ವ ಕಾಪಾಡಿಕೊಳ್ಳದೇ ಇದ್ದಾಗ ವಸಡಿನಿಂದ ರಕ್ತಬರಬಹುದು. ಕೆಲವರಿಗೆ ಧೂಮಪಾನ ಮಾಡುವ ಚಟ ಅತಿಯಾಗಿರುತ್ತದೆ. ಇಂತಹವರಿಗೂ ರಕ್ತ ಬರುವ ಸಾಧ‍್ಯತೆಯಿದೆ. ಕೆಲವೊಂದು ವಸಡಿಗೆ ಸಂಬಂಧಿಸಿದ ಖಾಯಿಲೆಗಳ ಆರಂಭಿಕ ಲಕ್ಷಣವಾಗಿರಬಹುದು.

ಗರ್ಭವತಿಯಾಗಿದ್ದಾಗ ಹಾರ್ಮೋನ್ ಬದಲಾವಣೆಯಿಂದ ಈ ರೀತಿ ಆಗುವ ಸಾಧ‍್ಯತೆಯಿದೆ. ಅದಲ್ಲದೇ ಹೋದಲ್ಲಿ ವಿಟಮಿನ್ ಕೆ, ವಿಟಮಿನ್ ಸಿ ಕೊರತೆ, ಮಧುಮೇಹಿಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.  ಇದರ ಜೊತೆಗೆ ಕೆಲವೊಂದು ಔಷಧಿಗಳ ಸೇವನೆ, ಹಲ್ಲಿನ ಸಮಸ್ಯೆ, ಎಚ್ ಐವಿ/ಏಡ್ಸ್, ಮಾನಸಿಕ ಒತ್ತಡ ಇತ್ಯಾದಿ ಸಮಸ್ಯೆಗಳಿಂದಲೂ ವಸಡಿನಲ್ಲಿ ರಕ್ತ ಕಾಣಿಸಿಕೊಳ್ಳಬಹುದು. ಹೀಗಾಗಿ ಇದನ್ನು ನಿರ್ಲಕ್ಷಿಸದೇ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ