ಬಿಜೆಪಿ ಜಿಲ್ಲಾಧ್ಯಕ್ಷ ಪತ್ನಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಶನಿವಾರ, 21 ಏಪ್ರಿಲ್ 2018 (19:39 IST)
ಯಾದಗಿರಿ ಜಿಲ್ಲೆಯಲ್ಲಿ ಒಂದು ಕಡೆ ಚುನಾವಣೆ ಕಾವು ಏರುತ್ತಿದ್ದರೆ ಇನ್ನೊಂದು ಕಡೆ ರಾಜಕೀಯ ದುರುದ್ದೇಶದಿಂದ ಬಿಜೆಪಿ ಜಿಲ್ಲಾಧ್ಯಕ್ಷನ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 
ಬಿಜೆಪಿ ಕಾರ್ಯಕರ್ತರು  ನೀತಿ ಸಂಹಿತೆ ಲೆಕ್ಕಿಸದೆ ಬಿಜೆಪಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ ಅವರ ಪತ್ನಿ ಶಿಲ್ಪಾ ಮೇಲಾದ ಹಲ್ಲೆಯನ್ನು ಖಂಡಿಸಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿದರು. 
 
ಬಿಜೆಪಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಾಗನೂರ ಪತ್ನಿ ಶಿಲ್ಪಾ ಮಾಗನೂರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಕಳೆದ ಬಾರಿ ಬಿಜೆಪಿ ಪಕ್ಷದಿಂದ ಚಂದ್ರಶೇಖರ ಮಾಗನೂರ ಯಾದಗಿರಿ ಮತಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದ್ರೆ ಈ ಬಾರಿ ಯಾದಗಿರಿ ಮತಕ್ಷೇತ್ರ ಬಿಜೆಪಿ ಆಕಾಂಕ್ಷಿಯಾಗಿದ್ದರು. 
 
ಇದೇ ಗುರುವಾರಚಂದ್ರಶೇಖರ ಸ್ವಗ್ರಾಮವಾಗಿರುವ ಸುರಪುರ ತಾಲೂಕಿನ ರಾಜನಕೊಳುರ ಗ್ರಾಮದ ಅವರ ಮನೆ ಪಕ್ಕದಲ್ಲಿ ಶಿಲ್ಪಾ ವಾಯು ವಿಹಾರಕ್ಕೆ ತರಳಿದಾಗ ಹಿಂಬದಿಯಿಂದ ಇಬ್ಬರು ದುಷ್ಕರ್ಮಿಗಳು ಶಿಲ್ಪಾಳಿಗೆ ಕಬ್ಬಿಣದ ರಾಡ್ ಕಾಯಿಸಿ ಬರೆ ಎಳೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಮತ್ತು ಚಂದ್ರಶೇಖರ ಮಾಗನೂರ ಅವರನ್ನು ರಾಜಕೀಯ ಬಿಡಬೇಕೆಂದು ದುಷ್ಕರ್ಮಿಗಳು ಜೀವ ಬೆದರಿಕೆ ಕೂಡ ಹಾಕಿದ್ದಾರೆ. 
 
ಶಿಲ್ಪಾಳಿಗೆ ಗಾಯವಾಗಿರುವುದರಿಂದ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಭಟನಾ ನಿರತರು ರಾಜಕೀಯ ದುರುದ್ದೇಶದಿಂದ ಶಿಲ್ಪಾ ಮಾಗನೂರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಚಂದ್ರಶೇಖರ ಮಾಗನೂರನ್ನು ರಾಜಕೀಯದಿಂದ ಬಿಡಿಸಲು ಸಾಧ್ಯವಿಲ್ಲ. ಹಲ್ಲೆಯನ್ನು ಮಾಡಿದ ದುಷ್ಕರ್ಮಿಗಳುನ್ನು ಪೊಲೀಸರು ಕೊಡಲೇ ಬಂಧಿಸಬೇಕು ಅಂತಾ ಪ್ರತಿಭಟನಾನಿರತರು ಪ್ರತಿಭಟಣೆ ನಡೆಸುವ ಮೂಲಕ ಒತ್ತಾಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ