ದೆಹಲಿ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವೇನು ಗೊತ್ತಾ?

ಗುರುವಾರ, 13 ಫೆಬ್ರವರಿ 2020 (11:17 IST)
ಬೆಳಗಾವಿ : ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿದ್ದಕ್ಕೆ ಬಿಜೆಪಿಗೆ ದೆಹಲಿ ಚುನಾವಣೆಯಲ್ಲಿ ಸೋಲಾಗಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ಚುನಾವಣೆಯಲ್ಲಿ ಧರ್ಮದ ಹೆಸರಿನಲ್ಲಿ ಪ್ರಚಾರ ಮಾಡಿದ್ದಕ್ಕೆ ಬಿಜೆಪಿ ಯಶಸ್ಸು ಸಿಗಲಿಲ್ಲ. ಒಡೆದು ಆಳುವ ರಾಜಕಾರಣಕ್ಕೆ ಜನ ಮನ್ನಣೆಯನ್ನು ನೀಡಿಲ್ಲ. ಕೆಲವರು ಅಭಿವೃದ್ಧಿಯಿಲ್ಲದೆ ಅಜೆಂಡಾ ಮೇಲೆ ಬರುತ್ತಾರೆ. ಮೋದಿ ಸರ್ಕಾರ ಅಜೆಂಡಾ ಮೇಲೆಯೇ ಅಧಿಕಾರಕ್ಕೆ ಬಂತು. ಮೋದಿ ಭಾವನಾತ್ಮಕವಾಗಿ ಜನರನ್ನ ಸೆಳೆಯಲು ಯತ್ನಿಸಿದ್ರು ಎಂದು ಹೇಳಿದ್ದಾರೆ.

 

ಹಾಗೇ ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲು ವಿಚಾರದ ಬಗ್ಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮ ಪ್ರಯತ್ನವನ್ನು ನಾವು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ