ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಬರಲಿದ್ದಾರಂತೆ ಪ್ರಿಯಾಂಕ!

ಭಾನುವಾರ, 22 ಏಪ್ರಿಲ್ 2018 (09:28 IST)
ಬೆಂಗಳೂರು: ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ ಹಲವಾರು ಬಾರಿ ರಾಜ್ಯದ ಹಲವೆಡೆ ಸಂಚರಿಸಿ ಪ್ರಚಾರ ನಡೆಸಿದ್ದಾರೆ. ಇದೀಗ ಅವರ ಸಹೋದರಿ ಸರದಿ.

ಪ್ರಿಯಾಂಕಾ ವಾದ್ರಾ ಕೂಡಾ ರಾಜ್ಯದಲ್ಲಿ ಪ್ರವಾಸ ನಡೆಸಿ ಕಾಂಗ್ರೆಸ್ ಪರ ಮತಯಾಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಸಹೋದರ ರಾಹುಲ್ ನಂತೆ ಸಕ್ರಿಯ ರಾಜಕಾರಣಿಯಾಗಿರದೇ ಇದ್ದರೂ ಪ್ರಿಯಾಂಕಾ ಕೂಡಾ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಾರೆ.

ಅದೇ ರೀತಿ ಇದೀಗ ರಾಜ್ಯದಲ್ಲಿ ಎರಡು ಕಡೆ ಪ್ರಚಾರ ನಡೆಸಲು ರಾಜ್ಯ ಕಾಂಗ್ರೆಸ್ ತಯಾರಿ ನಡೆಸಿದೆ ಎನ್ನಲಾಗಿದೆ. ದಿನಾಂಕ ಮತ್ತು ಸ್ಥಳ ಇನ್ನೂ ನಿಗದಿಯಾಗಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ