ಸಂಕಷ್ಟ ಪರಿಹಾರ ನೆಪದಲ್ಲಿ ಮಹಿಳೆಗೆ ಕೋಟಿ ಕೋಟಿ ವಂಚಿಸಿದ ಸ್ವಾಮೀಜಿ

ಶುಕ್ರವಾರ, 28 ಫೆಬ್ರವರಿ 2020 (11:01 IST)
ಕೋಲಾರ : ಅಮಾಯಕ ಮಹಿಳೆಗೆ ಬೆಂಗಳೂರಿನ ಸ್ವಾಮೀಜಿಯೊಬ್ಬ  ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣವೊಂದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಗ್ರಾಮದಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.


ಸಂಕಷ್ಟ ಪರಿಹಾರ ನೆಪದಲ್ಲಿ ಮಹಿಳೆಯಿಂದ ಚಿನ್ನ, ನಿವೇಶನ ಪಡೆದು ಸ್ವಾಮೀಜಿ ನಾಗರಾಜ್ ಮತ್ತು ಕುಟುಂಬಸ್ಥರು ಮೋಸ ಮಾಡಿದ ಹಿನ್ನಲೆಯಲ್ಲಿ ಮಹಿಳೆ  ಸ್ವಾಮೀಜಿ ವಿರುದ್ಧ ಬೆಂಗಳೂರು ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಈ ಬಗ್ಗೆ ಸ್ವಾಮೀಜಿ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರು ಸ್ವಾಮೀಜಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ