ಝೂಮ್ ಆಪ್ ಗೆ ಪರ್ಯಾಯ ಭಾರತದ್ದೇ ಆಪ್ ತಯಾರಿಸಲು ಪ್ರೋತ್ಸಾಹ ಕೊಡಲಿದೆ ಕೇಂದ್ರ

ಬುಧವಾರ, 27 ಮೇ 2020 (08:39 IST)
ನವದೆಹಲಿ: ಕೊರೋನಾ ಹರಡಿದ ಚೀನಾ ಉತ್ಪನ್ನಗಳ ಬಗ್ಗೆ ಈಗ ಜಾಗತಿಕವಾಗಿ ಒಂದು ರೀತಿಯ ಬಹಿಷ್ಕಾರ ಮನೋಭಾವ ಕಂಡುಬರುತ್ತಿದೆ. ಇದೀಗ ಭಾರತ ಸರ್ಕಾರ ಚೀನಾ ಮೂಲದ ಝೂಮ್ ಆಪ್ ಗೆ ಬದಲಾಗಿ ಭಾರತದ್ದೇ ಆಪ್ ತಯಾರಿಸಲು ಪ್ರೋತ್ಸಾಹ ನೀಡಲು ಮುಂದಾಗಿದೆ.


ಲಾಕ್ ಡೌನ್ ಸಮಯದಲ್ಲಿ ಮನೆಯಿಂದಲೇ ಕಂಪನಿಗಳಿಗೆ ಮೀಟಿಂಗ್ ನಡೆಸಲು ಝೂಮ್ ಆಪ್ ಸಹಕಾರಿಯಾಗಿತ್ತು. ಆದರೆ ಇದು ಸುರಕ್ಷಿತವಲ್ಲ ಎಂದು ಕೇಂದ್ರ ಎಚ್ಚರಿಕೆ ನೀಡಿತ್ತು.

ಈ ಚೀನಾ ಮೂಲದ ಝೂಮ್ ಆಪ್ ಬದಲಿಗೆ ಈಗ ಭಾರತದ್ದೇ ಗ್ರೂಪ್ ವಿಡಿಯೋ ಚ್ಯಾಟಿಂಗ್ ಆಪ್ ತಯಾರಿಸಲು ಇಲ್ಲಿನ ಸಾಫ್ಟ್ ವೇರ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಅಷ್ಟೇ ಅಲ್ಲ, ಇಂತಹ ಆಪ್ ತಯಾರಿಸುವ ಕಂಪನಿಗೆ ಆರ್ಥಿಕ ನೆರವು ನೀಡುವುದಾಗಿಯೂ ಘೋಷಿಸಿದೆ. ಈ ನಿಟ್ಟಿನಲ್ಲಿ ಭಾರತದ ಪ್ರಮುಖ ಸಾಫ್ಟ್ ವೇರ್ ಕಂಪನಿಗಳು ಈಗ ಕಾರ್ಯೋನ್ಮುಖವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ