ತೂಕ ಕಡಿಮೆಯಾಗಬೇಕಾದರೆ ಈ ಯೋಗ ಮಾಡಿ

Krishnaveni K

ಮಂಗಳವಾರ, 26 ಮಾರ್ಚ್ 2024 (10:28 IST)
Photo Courtesy: Twitter
ಬೆಂಗಳೂರು: ತೂಕ ಕಡಿಮೆ ಮಾಡಲು ನಾವು ಏನೇನೋ ಸರ್ಕಸ್ ಗಳನ್ನು ಮಾಡುತ್ತಿರುತ್ತೇವೆ. ಆದರೆ ಅದಕ್ಕೆ ಯೋಗದಲ್ಲಿ ಬೆಸ್ಟ್ ಪರಿಹಾರವಿದೆ ಎಂದು ನಿಮಗೆ ಗೊತ್ತಾ?

ಯೋಗ ಹಲವು ರೋಗ ಬಾಧೆ, ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಯೋಗಾಸನಗಳಲ್ಲಿ ಕೆಲವೊಂದು ತೂಕ ಕಡಿಮೆ ಮಾಡಲು ಅತ್ಯುತ್ತಮವಾಗಿದೆ. ತೂಕ ಇಳಿಸಲು ಆರೋಗ್ಯದಲ್ಲಿ ನಿಯಂತ್ರಣ ಮಾಡುವಷ್ಟೇ ದೇಹಕ್ಕೆ ಚಟುವಟಿಕೆ ನೀಡುವುದೂ ಮುಖ್ಯ. ಇದಕ್ಕಾಗಿ ಪ್ರತಿನಿತ್ಯ ಸೂರ್ಯ ನಮಸ್ಕಾರದ ಜೊತೆಗೆ ನೌಕಾಸನ ಮಾಡಿ. ನೌಕಾಸನ ಮಾಡುವುದು ಹೇಗೆ ಎಂದು ಇಲ್ಲಿ ನೋಡಿ.

ಎರಡೂ ಕಾಲುಗಳ ಪಾದಗಳನ್ನು ಮುಂದಕ್ಕೆ ಚಾಚಿ ನೆಲದಲ್ಲಿ ಊರಿ ಇಡಿ. ನಿಮ್ಮ ಮೊಣಕಾಲುಗಳು ಎದೆಯ ಮಟ್ಟಕ್ಕಿರಲಿ. ಎರಡೂ ಕೈಗಳನ್ನು ಮುಂದಕ್ಕೆ ಚಾಚಿ ನೆಲಕ್ಕೆ ಸಮನಾಗಿರುವಂತೆ ನೋಡಿಕೊಳ್ಳಿ. ಬಳಿಕ ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿ. ಹೀಗೆ ಮೇಲಕ್ಕೆತ್ತುವಾಗ ಕೈಗಳನ್ನು ಸಮಾನಂತರವಾಗಿ ಇಟ್ಟುಕೊಂಡು ಮೇಲೆತ್ತಿ.

ಈ ಭಂಗಿಯಲ್ಲಿ 30 ಸೆಕೆಂಡುಗಳ ಕಾಲ ಇದ್ದರೆ ಉತ್ತಮ. ಪ್ರತಿನಿತ್ಯ ಕನಿಷ್ಠ ಐದು ಬಾರಿ ಈ ರೀತಿ ಮಾಡುತ್ತಿದ್ದರೆ ಅನಗತ್ಯ ಬೊಜ್ಜು ಕರಗಿ ತೂಕ ಇಳಿಕೆಯಾಗುವುದಲ್ಲದೆ ಮಾನಸಿಕ ಒತ್ತಡದಂತಹ ಸಮಸ್ಯೆಗಳೂ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ