ರಾಜೇಶ್ ಪಾಟೀಲ್ ಅನೇಕರಿಗೆ ಆಶ್ಚರ್ಯವಾಗಿರಬಹುದು. ದಕ್ಷಿಣ ಭಾರತದ ಪುಟ್ಟ ಗ್ರಾಮದಲ್ಲಿ ಚಿಕ್ಕ ಬಾಲೆ ಜಗತ್ತಿನ ಅಮ್ಮ ಹೇಗಾಗಬಲ್ಲಳು? ಜಗತ್ತಿನ ಎಲ್ಲರಿಗೆ ಅಮ್ಮಳಾಗಿದ್ದು, ಅಸಾಮಾನ್ಯ ಪ್ರೀತಿಯಿಂದ, ಅನುಕಂಪ, ನಿಸ್ವಾರ್ಥ ಸೇವೆಯಿಂದಾಗಿ, ಎಲ್ಲವನ್ನು ತ್ಯಜಿಸಿ ವಾತ್ಸಲ್ಯವನ್ನು ಜಗತ್ತಿಗೆ ಧಾರೆಯರೆಯಲು ಸಿದ್ಧಳಾಗಿರುವವರೇ ಶ್ರೀ ಮಾತಾ ಅಮೃತಾನಂದಮಯಿ.
ಅಮ್ಮ ಅವರ ಜೀವನವನ್ನು ನೋಡಿದಲ್ಲಿ ಜಗತ್ತಿನ ಜನತೆಯ ಸರ್ವಾಂಗೀಣ ಸುಂದರವಾದ ಬದುಕನ್ನು ರೂಪಿಸಲು, ಎಲ್ಲರೂ ನೆಮ್ಮದಿಯಾಗಿರುವಂತೆ ಬಾಳಲು ತನ್ನನ್ನು ತಾನೇ ಸಮರ್ಪಣೆ ಮಾಡಿಕೊಂಡಿರುವುದು ಅನುಕರಣೀಯ.
ನಿರಾಶ್ರಿತರಾಗಿ ಅಮ್ಮನ ಬಳಿ ಆಶ್ರಯ ಕೇಳಿ ಬಂದಲ್ಲಿ ಅವರಿಗೆ ಸೂರು ನೀಡುವ ಮಾನವೀಯತೆ. ದುಃಖಿತರಾಗಿ ಬಂದಲ್ಲಿ ಅವರಿಗೆ ನೆಮ್ಮದಿಯನ್ನು ನೀಡಿ ಪ್ರೀತಿಯಿಂದ ಆಲಂಗಿಸುವುದರಿಂದ ಅವಳನ್ನು ಅಮ್ಮ ಎನ್ನುತ್ತೇವೆ. ಆಧ್ಯಾತ್ಮಿಕತೆಯ ಕೊರತೆಯಿಂದ ಬಂದಲ್ಲಿ ಅವರಿಗೆ ಜ್ಞಾನವನ್ನು ನೀಡುವುದರಿಂದ ಅಮ್ಮನನ್ನು ಗುರು ಎಂದು ಕರೆಯುತ್ತೇವೆ. ಈ ರೀತಿಯ ಧನಾತ್ಮಕ ಗುಣಗಳಿಂದ ನಿಸ್ವಾರ್ಥ ಮನೋಭಾವನೆಯಿಂದಾಗಿ ಇತರರನ್ನು ಗೌರವಿಸುವುದಲ್ಲದೇ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡುವುದರಿಂದ ವಿಶ್ವದ ಅಮ್ಮ ಎಂದು ಕರೆಯುತ್ತೇವೆ.
ಅಮ್ಮ ದರ್ಶನ ಮತ್ತು ಜ್ಞಾನದಿಂದ ಜಗತ್ತನ್ನು ಕತ್ತಲೆಯಿಂದ ಬೆಳೆಕಿನೆಡೆಗೆ ಸಾಗಿಸುತ್ತಿದ್ದಾರೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಭೂಮಿಯ ಗುಣ ಎಂತಹದು? ಧರ್ಮದಲ್ಲಿ ವಿಶ್ವ ಮತ್ತು ದೇವರ ಪಾತ್ರವೇನು? ಪ್ರೇಮ ಮತ್ತು ಕೌಟುಂಬಿಕ ಜೀವನ, ಅಧ್ಯಾತ್ಮ ಮತ್ತು ಜ್ಞಾನದ ತಿಳಿವಳಿಕೆ ಬಗ್ಗೆ ಅಮ್ಮ ಯೌವನದ ಹೊಸ್ತಿಲಲ್ಲಿ ಇರುವಾಗಲೇ ಎಲ್ಲ ಅನುಮಾನಗಳನ್ನು ದೂರ ಮಾಡಿದ್ದಳು.
ಅಮ್ಮ ಯಾವುದೇ ಗುರುವಿನ ಹತ್ತಿರ ಜ್ಞಾನ ಪಡೆಯಲಿಲ್ಲ ಅಥವಾ ವೇದಗಳನ್ನು ಓದಲಿಲ್ಲ. ಗ್ರಂಥ ಅಧ್ಯಯನ, ಸತ್ಯದೆಡೆಗೆ ಸಾಗುವ ವಾಸ್ತವತೆ, ಮತ್ತು ಜ್ಞಾನದಿಂದ ಸತ್ಯ ಸಂಗತಿಗಳೆಡೆಗೆ ಜಗತ್ತನ್ನು ಕರೆದೊಯ್ಯುವ ಕಾಯಕವನ್ನು ಮಾಡುತ್ತಾರೆ. ಇದಕ್ಕೆಲ್ಲಾ ಅಮ್ಮ ಅವರ ನಾಲ್ಕು ದಶಕಗಳ ಅಂದಿನ ಸರಳ ಬಾಲ್ಯದ ಮನೆ ಇಂದು ಜಗತ್ತಿನ ಲಕ್ಷಾಂತರ ಜನರಿಗೆ ಅಧ್ಯಾತ್ಮದ, ನೆಮ್ಮದಿಯ ತಾಣವಾಗಿದೆ.
ಅಮ್ಮ ಕನಸುಗಳು ಮಹಿಳೆ ಮತ್ತು ಪುರುಷ ಒಂದೇ ಹಕ್ಕಿಯ ಎರಡು ರೆಕ್ಕೆಗಳು ಎನ್ನುವ ಸತ್ಯವನ್ನು ಅರಿತು ಪರಸ್ಪರ ಅಭಿವೃದ್ಧಿಯಲ್ಲಿ ಸಾಗಿದಾಗ ಮಾತ್ರ ಜಗತ್ತು ಸುಂದರವಾಗಿರುತ್ತದೆ ಎನ್ನುವ ಅರಿವು ಜನರಲ್ಲಿ ಬಂದಾಗ ಮಾತ್ರ ಸುಖೀಸಮಾಜ ನಿರ್ಮಾಣವಾಗಲು ಸಾಧ್ಯ. ಮಹಿಳೆ ಮತ್ತು ಪುರುಷರಿಗೆ ಸರಿಸಮಾನತೆ ಬಂದಲ್ಲಿ ನನ್ನ ಕನಸು ನನಸಾಗಲು ಸಾಧ್ಯ ಎನ್ನುತ್ತಾರೆ ಅಮ್ಮ.
WD
WD
ಜಗತ್ತನ್ನು ತನ್ನ ಮನೆಯಂದು ತಿಳಿದು, ಪ್ರತಿಯೊಬ್ಬರ ಮುಖದಲ್ಲಿ ಮುಗುಳ್ನಗೆ ತರಲು ಸದಾ ಸಿದ್ಧಳಾದ ಅಮ್ಮ ದರ್ಶನಕ್ಕಾಗಿ ಬಂದ ಭಕ್ತರ ಕಣ್ಣೀರನ್ನು ಒರೆಸಿ ಅವರ ದುಃಖಗಳನ್ನು ಸದಾ ತಾಳ್ಮೆಯಿಂದ ಆಲಿಸಿ ಸುಂದರವಾದ ನಗು, ನಗೆಚಟಾಕಿಗಳ ಮುಖಾಂತರ ಜಗತ್ತಿನ ಭಕ್ತ ಸಮೂಹಕ್ಕೆ ನೆಮ್ಮದಿ ನೀಡಿದ್ದಾರೆ ಅಮ್ಮ.
ಜಗತ್ತಿನ ಅನೇಕ ಭಕ್ತರು ಅಮ್ಮನವರಲ್ಲಿ ಜೀವಿತಾವಧಿಯ ಭರವಸೆ, ಆಶಾಕಿರಣ, ಗೆಳೆತನವನ್ನು ಕಾಣುತ್ತಾರೆ. ತಮ್ಮ 17ನೇ ವಯಸ್ಸಿನಿಂದ ಭಕ್ತರಿಗೆ ದರ್ಶನ ನೀಡಲು ಆರಂಭಿಸಿದ ಅಮ್ಮ ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ , ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಭಕ್ತರಿಗೆ ದರ್ಶನ ನೀಡಿ ಸಾಂತ್ವನ ಒದಗಿಸುತ್ತಾರೆ.
ಅಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಭಕ್ತರಿಗೆ ಅಭಯ ಹಸ್ತ ನೀಡುವುದಲ್ಲದೇ ಭದ್ರತೆಯ ಭಾವನೆ ಮೂಡಿಸಿ, ಅವರ ಕುಂದುಕೊರತೆಗಳನ್ನು ಪ್ರೇಮದಿಂದ ಆಲಿಸಿ ಪರಿಹಾರ ಸೂಚಿಸುವುದರಿಂದ ಭಕ್ತರಿಗೆ ಪರಮಾನಂದವಾಗುತ್ತದೆ. ಭಕ್ತರ ಮನದಲ್ಲಿ ಹೊಸತೊಂದು ಆಶಾಕಿರಣ ಮೂಡುತ್ತದೆ. ಹೊಸ ಜಗತ್ತಿನಲ್ಲಿ ಬದುಕುವ ಭರವಸೆ ಮೂಡಿ ಚೈತನ್ಯ ಹೆಚ್ಚುತ್ತದೆ. ಹರೆಯದವರಾಗಲಿ, ವೃದ್ಧರಾಗಲಿ, ರೋಗಿಗಳಾಗಲಿ, ಆರೋಗ್ಯವಂತರಾಗಲಿ, ಬಡವರಾಗಲಿ, ಶ್ರೀಮಂತರಾಗಲಿ ಪ್ರತಿಯೊಬ್ಬರಿಗೂ ಅದೇ ನಿರ್ಮಲ ಪ್ರೀತಿ ನೀಡಿ ಆಲಂಗಿಸಿ ಆರೈಕೆ ಮಾಡುವುದು ಅಮ್ಮ ಅವರ ಜನ್ಮಸಿದ್ಧ ಕಾಯಕವಾಗಿದೆ.
ಅಮ್ಮ ಅವರ ಹಾರೈಕೆಗಳು *ಜಗತ್ತಿನ ಪ್ರತಿಯೊಬ್ಬರು ಒಂದು ರಾತ್ರಿಯಾದರೂ ಭಯವಿಲ್ಲದೇ ನಿದ್ರಿಸಲಿ *ಪ್ರತಿಯೊಬ್ಬರಿಗೆ ಒಂದು ದಿನವಾದರೂ ಹೊಟ್ಟೆ ತುಂಬಾ ಅಹಾರ ಸಿಗಲಿ. *ಒಂದು ದಿನವಾದರೂ ಹಿಂಸಾಚಾರದಿಂದ ಆಸ್ಪತ್ರೆಗೆ ದಾಖಲಾಗದ ರೋಗಿಯನ್ನು ಕಾಣದಂತಹ ದಿನ ಬರಲಿ *ಮನುಷ್ಯತ್ವ, ತಾಯಿ, ಗೆಳೆಯ, ಗುರು, ದೇವರು... ಹೀಗೆ ಭಕ್ತರು ಅಮ್ಮ ಅವರನ್ನು ವಿವಿಧ ರೂಪದಲ್ಲಿ ನೋಡುತ್ತಾರೆ. ಆದರೆ ಎಲ್ಲವನ್ನು ಮೀರಿ ಬೆಳೆದ ಅಮ್ಮ ವಾಸ್ತವದ ಕಡೆ ಗಮನ ಹರಿಸುವಂತೆ ಕರೆ ನೀಡುತ್ತಾರೆ. *ಕೊನೆಯ ಉಸಿರು ಇರುವವರೆಗೂ ಜನತೆ ಪರಸ್ಪರರನ್ನು ಪ್ರೀತಿಸಿ ಕಷ್ಟದಲ್ಲಿ ನೆರವಾಗಿ, ದುಃಖಿತರನ್ನು ಸಂತೈಸಿ- ಇದುವೇ ಜೀವನವೆಂದು ಅಮ್ಮ ಹೇಳುತ್ತಾರೆ.
ಅಮೃತಾನಂದಮಯಿ ಜನ್ಮದಿನ ಕಾರ್ಯಕ್ರಮಗಳು -------------------------------------- ಅಮೃತಾನಂದಮಯಿ ಅವರ ಜನ್ಮದಿನವನ್ನು ಸಂಭ್ರಮದಿಂದ ಅವರ ಮಠದಲ್ಲಿ ಸೆ.27ರಂದು ಆಚರಿಸಲಾಗುತ್ತಿದ್ದು, 54ನೇಯ ಹುಟ್ಟುಹಬ್ಬದ ಕಾರ್ಯಕ್ರಮಗಳ ವಿವರಗಳು ಈ ರೀತಿಯಾಗಿವೆ:
ಸೆಪ್ಟೆಂಬರ್ 27 ರಂದು * ಶ್ರೀ ಗುರುಪಾದ ಪೂಜಾ * ಹುಟ್ಟು ಹಬ್ಬದ ನಿಮಿತ್ಯ ಅಮ್ಮ ಅವರಿಂದ ಪ್ರವಚನ. * ಆಶ್ರಮ ಚಾರೀಟೇಬಲ್ ಯೋಜನೆಗಳಿಗೆ ಚಾಲನೆ * ಬಡತನದ ರೇಖೆಗಿಂತ ಕೆಳಗಿರುವ ರೈತರ 30 ಸಾವಿರ ಮಕ್ಕಳಿಗೆ ಸ್ಕಾಲರ್‌ಶಿಪ್ ವಿತರಣೆ. *ರೈತ ಕುಟುಂಬದ 5000 ಮಹಿಳೆಯರಿಗೆ ಗೃಹ ಕೈಗಾರಿಕೆಗಾಗಿ ತರಬೇತಿ ಹಾಗೂ ಅನುದಾನ. * ಬಡವರಿಗೆ ವಸ್ತ್ರ ವಿತರಣೆ * ಅಮೃತಾ ಕೀರ್ತಿ ಪುರಸ್ಕಾರ ಪ್ರಶಸ್ತಿ ವಿತರಣೆ. * ಅಮ್ಮ ಅವರ ದರ್ಶನದ ನಂತರ ಬಡವರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ. * ರಾತ್ರಿ ಅಮೃತಾ ವಿದ್ಯಾಲಯದ ಅಮೃತಾ ವಿಶ್ವ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು.
ತಲುಪುವುದು ಹೇಗೆ ------------------
ವಾಯು ಮಾರ್ಗ : ತ್ರೀವೆಂದ್ರಂನಿಂದ ದಕ್ಷಿಣದ ಅಮೃತಾಪುರಿ 110 ಕಿ.ಮಿ.ಗಳಿದ್ದು, ಕೊಚಿನ್‌ನಿಂದ 140 ಕಿ.ಮಿ.ದೂರದಲ್ಲಿ ವಿಮಾನ ನಿಲ್ದಾಣಗಳಿವೆ. ಅಲ್ಲಿಂದ ಟ್ಯಾಕ್ಸಿ ಮೂಲಕ ಆಶ್ರಮಕ್ಕೆ ತಲುಪಬಹುದು.
ರೈಲು ಹಾಗೂ ರಸ್ತೆ ಮಾರ್ಗ --------- ಕಯಾಮ್‌ಕುಲಮ್‌ನಿಂದ 12 ಕಿ.ಮಿ. ದೂರ,ಕರುನಾಗಪಲ್ಲಿಯಿಂದ ಕೇವಲ 10 ಕಿ.ಮಿ. ದೂರದಲ್ಲಿ ಅಮೃತಾಪುರಿ ಆಶ್ರಮವಿದೆ . ನಿಯಮಿತವಾಗಿ ಆಶ್ರಮಕ್ಕೆ ಬಸ್ ಸೌಕರ್ಯವಿದೆ.