ಮಹಾ ಶಿವರಾತ್ರಿ : ಶಿವನ ಶಕ್ತಿಯ ಬಗ್ಗೆ ತಿಳಿಯಲು ಈ ಲೇಖನ ಓದಿ .

ಶನಿವಾರ, 22 ಫೆಬ್ರವರಿ 2014 (18:42 IST)
- ಅರುಣಕುಮಾರ ಧುತ್ತರಗಿ

ಮಹಾಶಿವರಾತ್ರಿ ಹತ್ತಿರ ಬರುತ್ತಿದೆ , ಈ ಮಹಾ ಶಿವರಾತ್ರಿಯಂದಯ ಶಿವನ ಭಕ್ತರು ಉಪವಾಸ ಮಾಡುತ್ತಾರೆ. ಶಿವನಿಗಾಗಿ ಉಪವಾಸ ಮಾಡುವುದರಿಂದ ಕಲ್ಪವೃಕ್ಷ ಸಿಗುತ್ತದೆ ಎಂದು ನಂಬಲಾಗುತ್ತದೆ. ಶಿವನ ಕೃಪೆಯಿಂದ ಭಕ್ತ ಮಾರ್ಕಂಡೇಯಗೆ ಅಮರತ್ವ ಪ್ರಾಪ್ತ ವಾಗಿತ್ತು ಮತ್ತು ಮಹಾ ಪ್ರಳಯ ನೋಡುವ ಅವಕಾಶ ಕೂಡ ಪ್ರಾಪ್ತವಾಗಿದೆ.
PR

ದೆವತೆಗಳು, ಮನುಷ್ಯರು ಮತ್ತು ರಾಕ್ಷಸರಿಗೂ ಕೂಡ ಶಿವನ ಕೃಪೆಯಾಗಿದೆ. ಶಿವನು ಭಕ್ತರಿಗಾಗಿ ಎನೇಲ್ಲನ್ನು ನೀಡುತ್ತಾನೆ . ರಾಕ್ಷಸರಿಗೂ ಕೂಡ ವರವನ್ನು ನೀಡಿದ ಶಿವನ್ನು ಎಲ್ಲರು ಆರಾಧಿಸುತ್ತಾರೆ.
ತನ್ನ ಭಕ್ತ ಎನೂ ಕೇಳುತ್ತಾನೋ, ಅದೆಲ್ಲವನ್ನು ಶಿವನು ನೀಡುತ್ತಾನೆ.

ಬೇಡಿದೆಲ್ಲವನ್ನು ಶಿವನು ನೀಡುತ್ತಾನೆಂದು ಸಿಕ್ಕಿದ್ದೆಲ್ಲ ನೀಡಿದರೆ ಮುಂದೆ ನಿಮಗೇ ಅಪಾಯವಿದೆ. ಒಳ್ಳೆಯದು ಕೇಳಿದರು ನೀಡುತ್ತಾನೆ ಮತ್ತು ಕೆಟ್ಟದ್ದು ಕೇಳಿದರು ನೀಡುತ್ತಾನೆ. ಆದರೆ ಕೆಟ್ಟದ್ದು ಕೇಳಿದರೆ ಇದರಿಂದ ನಮಗೇ ಅಪಾಯ ಜಾಸ್ತಿ.
PR

ಹಿಂದಿನ ಕಾಲದಲ್ಲಿ ರಾಕ್ಷಸರು ಶಿವನಿಗೆ ಏನೆಲ್ಲವನ್ನು ಕೇಳಿದ್ದಾರೆ , ಆದರೆ ಆ ವರವೇ ಅವರಿಗೆ ಶಾಪವಾಗಿದೆ. ಭಸ್ಮಾಸುರ ಕೂಡ ಶಿವನಿಗೆ ದೊಡ್ಡ ವರ ಕೇಳಿದ ಆದರೆ ಅದೇ ವರದಿಂದ ತಾನೆ ಭಸ್ಮವಾದ ಭಸ್ಮಾಸುರನ ಕಥೆ ನೀವೆಲ್ಲ ಕೇಳಿರುತ್ತಿರಿ.

ಶ್ರೀಶೈಲ್ ಶಿಕರದ ಮೇಲೆ ವಿರಾಜಮಾನನಾಗಿ ಕುಳಿತ ಶಿವನಿಗೆ ಪ್ರಕೃತಿಯೇ ಪೂಜೆ ಮಾಡುತ್ತದೆ ಎಂದು ನಂಬಲಾಗುತ್ತದೆ.
PR

ಪವನ ವೃಕ್ಷದಿಂದ ಸುಗಂಧ ಹೊರಬರುತ್ತದೆ ಇದು ಶ್ರೀಶೈಲದ ಮಲ್ಲಿಕಾರ್ಜುನನಿಗೆ ಇದರ ಸುಗಂದ ಸಿಗುತ್ತದೆ , ಕುಟಜ್‌ ಪುಷ್ಪದಿಂದ ಪ್ರಕೃತಿ ಸುಂದರವಾಗುತ್ತದೆ. ಇದೆಲ್ಲ ಶಿವನ ಮಹಿಮೆಯಿಂದ ಎಂದು ಹೇಳಲಾಗುತ್ತದೆ.

ಶಿವನಿಗೆ ದಿನಾಲು ಅಭಿಷೇಕ ಮಾಡಲಾಗುತ್ತದೆ. ಪ್ರಕೃತಿ ಕೂಡ ಶಿವನಿಗೆ ಅಭಿಷೇಕ ಮಾಡುತ್ತದೆ ಎಂದು ನಂಬಲಾಗುತ್ತದೆ. ಬೆಳದಿಂಗಳಲ್ಲಿ ಹಿಮವೂ ಕೂಡ ಶಿವಗೆ ಹೊದಿಕೆಯಾಗಿತ್ತದೆ. ಈ ಪ್ರಕೃತಿ ಪ್ರೇರಿತ ಶಿವನ ದರ್ಶನ ಮಾಡಿ ಭಕ್ತರು ಪವಿತ್ರರಾಗುತ್ತಾರೆ ಮತ್ತು ತಮ್ಮ ಪಾಪಗಳನ್ನೆಲ್ಲ ತೊಳೆಕೊಳ್ಳುತ್ತಾರೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ.
PR

ಶಿವನ ಆರಾಧನೆಯಲ್ಲಿ ದೊಡ್ಡ ಶಕ್ತಿ ಇದೆ. ಶಿವನ ಆರಾಧನೆಯಿಂದ ಜೀವನದಲ್ಲಿ ಬರುವ ದೊಡ್ಡ ದೊಡ್ಡ ಸಮಸ್ಯೆಗಳೆಲ್ಲವೂ ದೂರವಾಗುತ್ತವೆ. ಮನುಷ್ಯ ತನ್ನ ಕೆಲಸ ಕಾರ್ಯಗಳ ಮಧ್ಯೆಯೂ ಕೂಡ ಶಿವನ ಆರಾಧನೆ ಮಾಡುತ್ತಿರಬೇಕು , ಇದರಿಂದ ಜೀವನ ಕಲ್ಯಾಣವಾಗುತ್ತದೆ.

ವೆಬ್ದುನಿಯಾವನ್ನು ಓದಿ