ಜೈನ ಧರ್ಮದಲ್ಲಿ ಸ್ತ್ತ್ರೀ ಮತ್ತು ಜಾತಿ

ಜೈನ ಧರ್ಮದಲ್ಲಿ ಸ್ತ್ತ್ರೀಯರಿಗೆ ವಿಶೇಷ ಸ್ಥಾನ ನೀಡಲಾಗಿದೆ. ಈ ಧರ್ಮವು ಸ್ತ್ತ್ರೀಯರಿಗೂ ನಿರ್ವಾಣ ಹೊಂದಲು ಅವಕಾಶ ಮಾಡಿಕೊಟ್ಟಿತ್ತು.

ಸ್ತ್ತ್ರೀಯರಿಗೆ ಯಾವುದೇ ಹಕ್ಕನ್ನು ನಿರಾಕರಿಸುವುದು ಸಾಮಾಜಿಕ ವ್ಯವಸ್ಥೆಗೆ ವಿರುದ್ಧವಾದುದೆಂದು ಪ್ರತಿಪಾದಿಸಿ ಜೈನ ಸಂಘಗಳಲ್ಲಿ ಅವರನ್ನು ಸೇರಿಸಿಕೊಳ್ಳಲಾಯಿತು. ಜೈನಧರ್ಮದಲ್ಲಿ ಸರ್ಮಿಣಿ ಮತ್ತು ಸರವಿಕರು ಎಂಬ ಎರಡು ಗುಂಪಿನ ಸ್ತ್ತ್ರೀ ಸದಸ್ಯರಿದ್ದರು.

ಜೈನ ಧರ್ಮವು ಜಾತಿ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿರಲಿಲ್ಲ. ಮಾನವ ಜೀವಿಗಳೆಲ್ಲರೂ ಸಮಾನರು. ಅಂದ ಮೇಲೆ ವಿಭಿನ್ನ ಜಾತಿಯ ಹೆಸರಿನಲ್ಲಿ ಮಾನವರನ್ನು ಪ್ರತ್ಯೇಕಿಸುವುದು ಸರಿಯಲ್ಲ ಎಂದು ಜೈನ ಧರ್ಮ ಹೇಳುತ್ತದೆ. ಧಾರ್ಮಿಕ ಆಚರಣೆಗಳ ನೆಪದಲ್ಲಿ ನಡೆಯುತ್ತಿದ್ದ ಯಜ್ಞಯಾಗ ಪ್ರಾಣಿ ಬಲಿಯನ್ನು ಈ ಧರ್ಮದಲ್ಲಿ ವಿರೋಧಿಸಲಾಗುತ್ತದೆ.

ಜೈನ ಧರ್ಮದಲ್ಲಿ ಮಾನವನ ಪ್ರಯತ್ನಕ್ಕೆ ಪ್ರಾಮುಖ್ಯತೆಯನ್ನು ನೀಡಿ ಅವನಲ್ಲಿ ಸ್ವಾವಲಂಬನೆಯನ್ನು ಪ್ರತಿಪಾದಿಸಿತು. ತನ್ನ ಮುಕ್ತಿ ಅನ್ಯರ ಸಹಾಯದಿಂದ ದೊರಕಲಾರದು ಮುಕ್ತಿಯ ಸಾಧನೆಗೆ ಆ ವ್ಯಕ್ತಿಯೇ ಪ್ರಯತ್ನಿಸಬೇಕು. ಇಲ್ಲಿ ದೇವರಿಗೆ ಸ್ತಾನವಿಲ್ಲ.

ಆದರೂ ತಮ್ಮ ಸಾಧನೆಗೆ ಮಾರ್ಗದರ್ಶಕರೆಂದು ತೀರ್ಥಂಕರರು ಎಂದರೆ ಲೀಜೀವನದಿಯನ್ನು ದಾಟಿಸುವವರುಳಿ ಅವಶ್ಯವೆಂದು ತೀರ್ಥಂಕರರನ್ನು ಪೂಜಿಸುತ್ತಾರೆ.

ವೆಬ್ದುನಿಯಾವನ್ನು ಓದಿ